ದೊಡ್ಡಬಳ್ಳಾಪುರ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸಿ ಸೋಂಕಿಗೆ ಒಳಗಾದ ಕರೊನಾ ವಾರಿಯರ್ ಒಬ್ಬರಿಗೆ ತೀವ್ರ ಉಸಿರಾಟದ ತೊಂದರೆ ಕಾರಣ,ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸುಮಾರು 57 ವರ್ಷ ವಯಸ್ಸಿನ ಕರೊನಾ ವಾರಿಯರ್.ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಸೋಂಕಿಗೊಳಗಾಗಿ,ನಗರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ತೀವ್ರ ಉಸಿರಾಟದ ತೊಂದರೆ ಕಾರಣ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 19 ಮಂದಿಗೆ ಕರೊನಾ ಸೋಂಕು ದೃಢ
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಶುಕ್ರವಾರದ ಕರೊನಾ ಬುಲೆಟಿನ್ ವರದಿಯಂತೆ ತಾಲೂಕಿನ 16 ಗಂಡು ಹಾಗೂ 3 ಮಹಿಳೆಯರು ಸೇರಿದಂತೆ 19 ಮಂದಿಗೆ ಸೋಂಕು ದೃಢಪಟ್ಟಿದ್ದು,ಇಪ್ಪತ್ತೊಂದು ಮಂದಿ ಗುಣಮುಖರಾಗಿದ್ದಾರೆ.
ಹರಿತಲೇಖನಿಗೆ ದೊರಕಿರುವ ವರದಿಯನ್ವಯ ರೈಲ್ವೇ ಸ್ಟೇಷನ್ 2, ಬಾಶೆಟ್ಟಿಹಳ್ಳಿ 2, ಡಿಕ್ರಾಸ್ 1, ಪಾಲನ ಜೋಗಹಳ್ಳಿ 2, ಶಾಂತಿನಗರ 1, ಗಂಗಾಧರಪುರ 1, ತೇರಿನ ಬೀದಿ 2, ಮಾರುತಿ ನಗರ 1, ವಿನಾಯಕನಗರ 1, ಶಾಂತಿನಗರ ಏಳನೆ ರಸ್ತೆ 1, ದರ್ಗಾಪುರದ 1, ದೊಡ್ಡಬಳ್ಳಾಪುರದ ಇಬ್ಬರು ಕರೊನಾ ವಾರಿಯರ್ಸ್ ಹಾಗೂ ವಡ್ಡನಹಳ್ಳಿ ಗ್ರಾಮದ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ತಾಲೂಕಿನಲ್ಲಿ 492 ಕರೊನಾ ಪ್ರಕರಣಗಳಾಗಿದ್ದು,16 ಮಂದಿ ಮೃತ ಪಟ್ಟು, 194 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 36 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 246 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.