ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮಾಂತರ ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್.ಸುಂದರೇಶ್ ನಾಯ್ಕ್ ಅಚ್ಚರಿಯ ಬೆಳವಣಿಗೆಯಲ್ಲಿ ಕೆ.ಆರ್.ಪುರಂಗೆ ವರ್ಗಾವಣೆಯಾಗಿದ್ದಾರೆ.
ದೊಡ್ಡಬಳ್ಳಾಪುರ ನಗರ ಉಪ ವಿಭಾಗದಲ್ಲಿ ಸುಮಾರು ನಾಲ್ಕು ವರ್ಷ.ಹಾಗೂ,ಗ್ರಾಮಾಂತರ ವಿಭಾಗದಲ್ಲಿ ಆರು ತಿಂಗಳು ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಉತ್ಸಾಹಿ ಅಧಿಕಾರಿಯಾಗಿದ್ದ ಆರ್.ಸುಂದರೇಶ್ ನಾಯಕ್ ಬೆಸ್ಕಾಂ ಇಲಾಖೆಯಲ್ಲಿನ ಸಮಸ್ಯೆಗಳನ್ನು ಸಾಧ್ಯವಾದಷ್ಟು ನೀಗಿಸಲು ಶ್ರಮಪಟ್ಟಿದ್ದರು.
ಇವರ ಅವಧಿಯಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಹಾಗೂ ಗ್ರಾಹಕರ ಸ್ನೇಹಿಯಾಗಿರಲು ದೊಡ್ಡಬಳ್ಳಾಪುರ ಉಪವಿಭಾಗವನ್ನು ಎರಡು ಉಪವಿಭಾಗವಾಗಿ ಬೇರ್ಪಡಿಸಿ,ಗ್ರಾಮೀಣ ಮತ್ತು ನಗರ ಉಪ ವಿಭಾಗವಾಗಿ ಮಾಡಿದ್ದರು.
ತಾಲೂಕಿನಲ್ಲಿ 5 ಶಾಖೆಗಳನ್ನು 8 ಶಾಖೆಗಳಾಗಿ ಹೆಚ್ಚಿಸಿ ನಮ್ಮ ತಾಲ್ಲೂಕಿನ ರೈತರಿಗೆ ಅನುಕೂಲವಾಗುವಂತೆ ಹೆಚ್ಚುವರಿ ವಿದ್ಯುತ್ ಮಾರ್ಗದಾಳುಗಳನ್ನು ನೇಮಿಸಿದ್ದರು ಸಹ ಸಾಧ್ಯವಾದಷ್ಟು ವೋಲ್ಟೇಜ್ ತೊಂದರೆ ಆಗದಂತೆ ನೋಡಿಕೊಂಡಿದ್ದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆಯನ್ನು ಹೋಗಲಾಡಿಸಲು ಎಲ್ಲಾ ಕುಡಿಯುವ ನೀರಿನ ಸ್ಥಾವರಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಮಾತ್ರವಲ್ಲದೆ ಎಲ್ಲಾ ಹಳ್ಳಿಗಳಿಗೂ ಸಹ ನಿರಂತರ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಗಂಗಾಕಲ್ಯಾಣ ಮತ್ತು ಕುಡಿಯುವ ನೀರಿನ ಸ್ಥಾವರಗಳಿಗೆ ಮೊದಲ ಆದ್ಯತೆ ನೀಡಿ ಬಹುತೇಕ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗಿದೆ.ರೈತರಿಗೆ ಅನುಕೂಲವಾಗಲೆಂದು ಹೆಚ್ಚುವರಿ ಮತ್ತು ಅಕ್ರಮ ಸಕ್ರಮ ಯೋಜನೆಯಡಿಗಳಲ್ಲಿ ಸುಮಾರು 500ಕ್ಕೂ ಹೆಚ್ಚಿನ ಪರಿವರ್ತಕಗಳನ್ನು ಅಳವಡಿಸಲಾಗಿದೆ.ಮಾತ್ರವಲ್ಲದೆ HVDS ಯೋಜನೆಯಡಿಯಲ್ಲಿ ಸುಮಾರು 4000ಕ್ಕೂ ಹೆಚ್ಚು ಪರಿವರ್ತಕ ಅಳವಡಿಸಲು ಪ್ರಸ್ಥಾವನೆಯನ್ನು ಸಲ್ಲಿಸಲಾಗಿದೆ.
ಮೊದಲ ಹಂತದಲ್ಲಿ ಮಾಡೆಲ್ ವಿಲೇಜ್ ಯೋಜನೆಯಡಿಯಲ್ಲಿ ಒಟ್ಟು 6 ಗ್ರಾಮ ಗಳನ್ನು ಆಯ್ಕೆ ಮಾಡಿ.ಹಳೆಯ ವಿದ್ಯುತ್ ಮಾರ್ಗದಾಳುಗಳನ್ನು ದುರಸ್ಥಿಗೊಳಿಸಿ ವಿದ್ಯುತ್ ಸಂಬಂಧಿತ ಎಲ್ಲಾ ದೂರುಗಳನ್ನು ಸರಿಪಡಿಸಲಾಗಿದೆ.ಬೆಸ್ಕಾಂ ಉಪವಿಭಾಗಕ್ಕಾಗಿ ಎಪಿಎಸಿ ಮುಂಭಾಗ ಸ್ವಂತ ಕಟ್ಟಡ ನಿರ್ಮಿಸಲಾಗಿದೆ.ಎಲ್ಲಾ ರೈತರು,ಪವರ್ ಲೂಮ್ ಗ್ರಾಹಕರು, ಹಾಗೂ ತಾಲೂಕಿನ ಎಲ್ಲಾ ಗ್ರಾಹಕರಿಗೆ ಸ್ಪಂದಿಸಿ ಸೌಹಾರ್ದಿತವಾಗಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಇವರದ್ದು.ಪವರ್ ಮ್ಯಾನ್ ಗಳಿಗೆ ಸುರಕ್ಷಿತ ಸಾಮಗ್ರಿಗಳನ್ನು ಒದಗಿಸಿ ಯಾವುದೇ ಮೇಜರ್ ಅಪಘಾತವಾಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರು.
ಉತ್ತಮ ಕಾರ್ಯಕ್ಕೆ ಪ್ರಶಸ್ತಿ
2018-19ನೇ ಸಾಲಿನಲ್ಲಿ ಉಪವಿಭಾಗದ ಇವರ ಉತ್ತಮ ಕೆಲಸಗಳನ್ನು ಗುರುತಿಸಿ ಅಂದಿನ ಬೆಸ್ಕಾಂ ಇಲಾಖೆಯ ನಿರ್ದೇಶಕಿ ಶಿಖಾ ಅವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದರು.
ದೊಡ್ಡಬಳ್ಳಾಪುರದಲ್ಲಿ ಕರ್ತವ್ಯ ಜೀವನದ ಅಮೂಲ್ಯ ಘಟ್ಟ: ಸುಂದ್ರೇಶ್ ನಾಯಕ್
ದೊಡ್ಡಬಳ್ಳಾಪುರ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದು ನನ್ನ ಜೀವನದ ಅತೀ ಅಮೂಲ್ಯ ಘಟ್ಟವೆಂದೇ ಪರಿಗಣಿಸುತ್ತೇನೆ. ಇವೆಲ್ಲವನ್ನೂ ಸಾಧಿಸಲು ನನ್ನ ಇಲಾಖೆ, ನನ್ನ ಮೇಲಧಿಕಾರಿಗಳು, ಕಚೇರಿಯ ಎಲ್ಲಾ ಸಿಬ್ಬಂದಿಗಳು, ಶಾಖಾಧಿಕಾರಿಗಳು, ಪವರ್ ಮ್ಯಾನ್ಗಳು ಮತ್ತು ಜಿವಿಪಿಗಳು ಹಾಗೂ ಮುಖ್ಯವಾಗಿ ತಾಲೂಕಿನ ಜನತೆಯ ಸಹಕಾರ ಮತ್ತು ನಿಮ್ಮ ಪ್ರೋತ್ಸಾಹದಿಂದ ಈ ನನ್ನ ನಾಲ್ಕು ವರ್ಷದ ಪಯಣವನ್ನು ಅವಿಸ್ಮರಣೀಯ ಆಗಿಸಿದೆ ಎಂದು ಹರಿತಲೇಖನಿ ಮೂಲಕ ಸುಂದರೇಶ್ ನಾಯಕ್ ತಾಲೂಕಿನ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಧಿಕಾರಿಗಳ ಅವಧಿಯಲ್ಲಿ ಕೈಗೊಳ್ಳಲಾದ ಕ್ರಮಗಳು ಶಾಶ್ವತವಾಗಿ ಉಳಿಯುತ್ತವೆ. ಎಂಬುದಕ್ಕೆ ಸುಂದರೇಶ್ ನಾಯಕ್ ಅವರ ಕಾರ್ಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಾಕ್ಷಿಯಾಗಿರಲಿದೆ.