Site icon Harithalekhani

ಕಟ್ಟಡ ಕೂಲಿ ಕಾರ್ಮಿಕರಿಗೆ ಲಾಕ್‌ಡೌನ್ ವಿನಾಯಿತಿಯಿಲ್ಲ: ರಾಘವ ಎಸ್.ಗೌಡ

ದೊಡ್ಡಬಳ್ಳಾಪುರ: ಕರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಘೋಷಿಸಿರುವ ಒಂದು ವಾರದ ಲಾಕ್‌ಡೌನ್ ವೇಳೆ,ಕಟ್ಟಡ ಕೂಲಿ ಕಾರ್ಮಿಕರು ರಸ್ತೆ ಗಿಳಿಯಲು ಯಾವುದೇ ವಿನಾಯಿತಿ ನೀಡಿಲ್ಲ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಎಸ್.ಗೌಡ ಹರಿತಲೇಖನಿಗೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರ ಲಾಕ್‌ಡೌನ್ ನಿಯಮಾವಳಿಯಲ್ಲಿ ಕಟ್ಟಡ ಕೂಲಿ ಕಾರ್ಮಿಕರಿಗೆ ವಿನಾಯಿತಿ ನೀಡಿದ್ದರು.ಕೆಲಸಕ್ಕೆ ತೆರಳುವ ವೇಳೆ ಪೊಲೀಸರು ತಡೆಯುತ್ತಿದ್ದಾರೆನ್ನುವ ಆರೋಪದ ಹಿನ್ನಲೆ ಹರಿತಲೇಖನಿ ತಂಡ ರಾಘವ ಎಸ್.ಗೌಡರಿಂದ ಮಾಹಿತಿ ಪಡೆದಿದೆ.

ಸರ್ಕಾರದ ನಿಯಮಾವಳಿಯಲ್ಲಿ ಕಟ್ಟಡ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಇದ್ದು ಕಾಮಗಾರಿ ನಡೆಸಬಹುದೇ ಹೊರತು,ಬೇರೆಡೆಗಳಿಂದ ಕೆಲಸಕ್ಕೆ ತೆರಳಲು ಅವಕಾಶವಿಲ್ಲ.ಇನ್ನು ಗಾರ್ಮೆಂಟ್ಸ್ ಉದ್ಯಮಕ್ಕೆ ಸೂಕ್ತ ಮುಂಜಾಗ್ರತೆ ಕ್ರಮ ಹಾಗೂ ಸಿಬ್ಬಂದಿಯ ಕಡಿತಮಾಡಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದರು.

Exit mobile version