ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಕುರಿತಾದ ತಾಲೂಕಿನ ಮೊದಲ ಕರೊನಾ ಬುಲೆಟಿನ್ ಅನ್ನು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಬಿಡುಗಡೆ ಮಾಡಿದ್ದು,ಹರಿತಲೇಖನಿಗೆ ಲಭ್ಯವಾಗಿದೆ.
ಕರೊನಾ ಸೋಂಕು ತಾಲೂಕಿನಲ್ಲಿ ಶತಕದ ಅಂಚಿಗೆ ತಲುಪಿದ್ದು,ಇಂದು ಸಹ ಆರು ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.
ನಗರದ ಚೈತನ್ಯ ನಗರದ ಒಬ್ಬ ಮಹಿಳೆ,ಕುಂಬಾರ ಪೇಟೆ,25 ನೇ ವಾರ್ಡ್,ಗಣೇಶ ದೇವಸ್ಥಾನ ಸಮೀಪದಲ್ಲಿ ಮೂರು ಮಂದಿ ಪುರುಷರು ಹಾಗೂ ಒಬ್ಬ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ,ಇನ್ನು ಟಿಬಿ ವೃತ್ತದ ಬಳಿಯಿರುವ ಪ್ರಿಯದರ್ಶಿನಿ ಲೇಔಟ್ ನ ಒಬ್ಬ ಪುರುಷನಲ್ಲಿ ಸೋಂಕು ದೃಢ ಪಟ್ಟಿದೆಯೆಂದು ಹರಿತಲೇಖನಿಗೆ ದೊರೆತಿರುವ ವರದಿ ತಿಳಿಸಿದೆ.
ಇಲ್ಲಿಯವರೆಗೆ ತಾಲೂಕಿನಲ್ಲಿ 89 ಮಂದಿಗೆ ಸೋಂಕು ದೃಢಪಟ್ಟಿದ್ದು,ನಾಲ್ಕು ಮಂದಿ ಮರಣ ಹೊಂದಿದ್ದಾರೆ,ಅಲ್ಲದೆ 6 ಮಂದಿ ಗುಣಮುಖರಾಗಿದ್ದರೆ.
ಕರೊನಾ ಸೋಂಕು ಬುಲೆಟಿನ್ ಗೊಂದಲದಿಂದಾಗಿ ಸಾರ್ವಜನಿಕರಿಗಾಗುತ್ತಿರುವ ಆತಂಕದ ಕುರಿತು.ಶಾಸಕ ಟಿ.ವೆಂಕಟರಮಣಯ್ಯ ಸ್ಪಂದಿಸಿ ತಾಲೂಕು ಬುಲೆಟಿನ್ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದ್ದರು.