Site icon Harithalekhani

ಆತಂಕ ಬೇಡಾ: ಕರೊನಾ ಸೋಂಕಿತ 355 ಮಂದಿಯಲ್ಲಿ 148 ಮಂದಿ ಗುಣಮುಖ..!

ಹರಿತಲೇಖನಿ : ಮಹಾ ಮಾರಿ ಕರೊನಾ ಸೋಂಕಿನಿಂದ ಉಂಟಾಗುತ್ತಿರುವ ಆತಂಕ,ಹತಾಶೆ,ಬೇಸರದ ನಡುವೆಯೂ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಹೊರಬರುತ್ತಿರುವ ಭರವಸೆಯ ಬೆಳಕು ಕಂಡುಬರುತ್ತಿದೆ‌

ತಜ್ಞ ವೈದ್ಯರ ಪ್ರಕಾರ ಕರೊನಾದಿಂದ ಸಾವನಪ್ಪುವ ಸಂದರ್ಭ ಅತಿ ಕಡಿಮೆಯಾದರೂ,ಈ ಸೋಂಕು ಮತ್ತೊಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುತ್ತದೆ ಎಂಬುದಷ್ಟೆ ಆತಂಕ.ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹ ವೃದ್ದರು,ಮಕ್ಕಳು,ರೋಗಿಗಳಿಗೆ ಮಾರಕವಾಗಲಿ.ಅಲ್ಲದೆ ಸೋಂಕಿಗೆ ಔಷಧಿ ಇಲ್ಲದ ಕಾರಣದಿಂದಲೇ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಬೇಕೆಂದು ಸಾರಿ ಸಾರಿ ಹೇಳಲಾಗುತ್ತಿದೆ.

ಹರಿತಲೇಖನಿಗೆ ಸಿಕ್ಕಿದೆ ಕರೊನಾ ಕಂಪ್ಲೀಟ್ ಡೀಟೈಲ್ಸ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶನಿವಾರದ ವರದಿಯಂತೆ 355 ಮಂದಿಯಲ್ಲಿ ಸೋಂಕು ದೃಢಪಟ್ಟು 148 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.ಇವರಲ್ಲಿ ಕೆಲವರಿಗೆ ಯಾವುದೇ ಲಕ್ಷಣ ಇಲ್ಲದಿದ್ದರು ಸಹ,ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದೆ.

ದೊಡ್ಡಬಳ್ಳಾಪುರ ಒಟ್ಟು  ಸೋಂಕಿತರು 52 ಕೇಸ್ ,ಬಿಡುಗಡೆಯಾದವರು 15,ಸಕ್ರಿಯ 35 ಮತ್ತು ಸಾವು 2,ದೇವನಹಳ್ಳಿ ಒಟ್ಟು  ಸೋಂಕಿತರು 55ಕೇಸ್,ಬಿಡುಗಡೆಯಾದವರು15, ಸಕ್ರಿಯ 36ಮತ್ತು ಸಾವು 0, ನೆಲಮಂಗಲ ಒಟ್ಟು  ಸೋಂಕಿತರು 62 ಕೇಸ್,ಬಿಡುಗಡೆಯಾದವರು  17,ಸಕ್ರಿಯ 41ಮತ್ತು ಸಾವು 3,ಹೊಸಕೋಟೆ ಒಟ್ಟು  ಸೋಂಕಿತರು 100ಕೇಸ್ , ಬಿಡುಗಡೆಯಾದವರು  59,ಸಕ್ರಿಯ 41ಮತ್ತು ಸಾವು 3 ಆಗಿದೆ.

ಈ ಪಟ್ಟಿಯಲ್ಲಿ ಸಾವನಪ್ಪಿರುವ ಮಂದಿಗೆ ಕರೊನಾ ದೃಢಪಟ್ಟಿದ್ದು ಮಾತ್ರವಾಗಿದ್ದು ಅನ್ಯರೋಗದಿಂದ ಬಳಲುತ್ತಿದ್ದವರೇ ಎಂದು ಹೆಸರೇಳಲು ಇಚ್ಚಿಸದ ವೈದ್ಯಕೀಯ ಹಿರಿಯ ಸಿಬ್ಬಂದಿ ಹರಿತಲೇಖನಿಗೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮಂಗಳವಾರ ರಾತ್ರಿಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯನ್ನು ಮತ್ತೆ ಒಂದು ವಾರಗಳ ಕಾಲ ಸೀಲ್ ಡೌನ್ ಮಾಡಲಾಗುತ್ತಿದ್ದು,ಅನಗತ್ಯವಾಗಿ ಹೊರಗೆ ಓಡಾಡದೆ,ಅನಿರ್ವಾರ್ಯವಾಗಿ ಹೊರ ಓಗಬೇಕಾದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಪಾಡಿಕೊಂಡು ಮಹಾಮಾರಿ ಕರೊನಾ ಸೋಂಕು ನಿಯಂತ್ರಣಕ್ಕೆ ನಾವೆಲ್ಲರು ಒಟ್ಟಾಗಿ ಶ್ರಮಿಸೋಣ ಎಂಬುದು ಹರಿತಲೇಖನಿ ತಂಡದ ಕಳಕಳಿ.

Exit mobile version