Site icon Harithalekhani

ಕರೊನಾ ಆತಂಕದ ನಡುವೆಯೂ ಉದ್ಘಾಟನೆ ಕಂಡ ದೊಡ್ಡಬಳ್ಳಾಪುರ ಬಸ್ ನಿಲ್ದಾಣ / ಸುಸಜ್ಜಿತ ಬಸ್ ನಿಲ್ದಾಣದ ಭರವಸೆ ನೀಡಿದ ಸಚಿವ ಲಕ್ಷ್ಮಣ ಸವದಿ

ದೊಡ್ಡಬಳ್ಳಾಪುರ:
ಕೊರೊನಾ ಲಾಕ್ಡೌನ್ ಪರಿಣಾಮದಿಂದ
ರಾಜ್ಯ ಸಾರಿಗೆ ಸಂಸ್ಥೆ
2600 ಕೋಟಿ ರೂ
ನಷ್ಟ ಅನುಭವಿಸಿದ್ದು, ಸಿಬ್ಬಂದಿಯ
ಎರಡು ತಿಂಗಳ ವೇತನವನ್ನು
ಸರ್ಕಾರವೇ ನೀಡಿದೆ.
ತಿಂಗಳಿನಿಂದ ಸಿಬ್ಬಂದಿ ವೇತನವನ್ನು
ಶೇಕಡ 75ರಷ್ಟು ಸರ್ಕಾರ
ಭರಿಸಿದರೆ ಉಳಿದದ್ದನ್ನು ಸಾರಿಗೆ
ಸಂಸ್ಥೆ ಭರಿಸುತ್ತದೆ ಎಂದು
ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ
ಎಂದು ಉಪಮುಖ್ಯಮಂತ್ರಿ ಹಾಗೂ
ಸಾರಿಗೆ ಸಚಿವ ಲಕ್ಷ್ಮಣ
ಸವದಿ ಹೇಳಿದ್ದಾರೆ.

ನಗರದ ಸಿದ್ದಲಿಂಗಯ್ಯ ವೃತ್ತದ
ಬಳಿ ಕರ್ನಾಟಕ ರಾಜ್ಯ
ಸಾರಿಗೆ ಸಂಸ್ಥೆಯ ನೂತನ
ಬಸ್ ನಿಲ್ದಾಣವನ್ನು ಅವರು
ಉದ್ಘಾಟಿಸಿ ಮಾತನಾಡಿದರು.

ಕೊವಿಡ್19 ಲಾಕ್ಡೌನ್ ಪರಿಣಾಮ
ಸಾರಿಗೆ ಸಂಸ್ಥೆ 2600
ಕೋಟಿ ರೂ ನಷ್ಟ
ಅನುಭವಿಸಿದೆ. ಪ್ರತಿ ತಿಂಗಳು
326 ಕೋಟಿ ರೂಗಳನ್ನು  ಸಿಬ್ಬಂದಿಗೆ
ವೇತನ ನೀಡಬೇಕಿದೆ. ಲಾಕ್ಡೌನ್ ತೆರವಾದ
ನಂತರದ 2 ತಿಂಗಳು
ಸರ್ಕಾರವೇ ವೆಚ್ಚವನ್ನು
ಭರಿಸಿದೆ. ಸಂಸ್ಥೆಗೆ
ಬರುತ್ತಿರುವ ಆದಾಯ ತೀವ್ರ
ಕುಸಿದಿದ್ದು, ಬಸ್ ಡೀಸೆಲ್ಗೂ ಸಾಲುತ್ತಿಲ್ಲ.
ಇದಲ್ಲದೇ ಸಂಸ್ಥೆಯ ನಿರ್ವಹಣಾ
ವೆಚ್ಚಗಳನ್ನು ತೂಗಿಸುವುದು ಕಷ್ಟಕರವಾಗಿದೆ.
ಇತ್ತೀಚೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ
ಇಳಿಮುಖವಾಗಿರುವುದು, ಬಸ್ಗಳಲ್ಲಿ ಸಾಮಾಜಿಕ
ಅಂತರ ಕಾಪಾಡಿಕೊಳ್ಳುವುದು, ಪ್ರಯಾಣಿಕರಲ್ಲಿ
ಭಯ ಹೋಗಲಾಡಿಸುವುದು ಸಂಸ್ಥೆಗೆ
ದೊಡ್ಡ ಸವಾಲಾಗಿದೆ. ಇನ್ನು
ಮುಂದೆ ಶೇ.75ರಷ್ಟು
ವೆಚ್ಚ ಭರಿಸುವಂತೆ ಮುಖ್ಯಮಂತ್ರಿಗಳಿಗೆ
ಮನವಿ ಮಾಡಲಾಗಿದೆ.
ನಡುವೆ ಬಸ್ಗಳ ಸಂಚಾರ
ನಿಲ್ಲಿಸದೇ ಜನರಿಗೆ ಸಾರಿಗೆ
ಸೇವೆಯನ್ನು ನೀಡುವುದು ಸರ್ಕಾರದ
ಹೊಣೆಯಾಗಿದ್ದು, ಸಾರಿಗೆ ಸಂಸ್ಥೆ
ಸೇವಾ ಮನೋಭಾವದಿಂದ ಕಾರ್ ನಿರ್ವಹಿಸುತ್ತಿದೆ.
ಕೊವಿಡ್19 ಸೋಂಕು
ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು
ಕಡ್ಡಾಯವಾಗಿ ಸಾಮಾಜಿಕ ಅಂತರ
ಕಾಪಾಡಿಕೊಂಡು ಮಾಸ್ಕ್ ಧರಿಸಿ
ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು
ಮನವಿ ಮಾಡಿದರು.

ಸುಸಜ್ಜಿತ ಬಸ್ ನಿಲ್ದಾಣದ
ಭರವಸೆ
:

ಬೆಳೆಯುತ್ತಿರುವ ನಗರಕ್ಕೆ ಇನ್ನೂ
ಸುಸುಜ್ಜಿತ ಬಸ್ ನಿಲ್ದಾಣ
ಬೇಕು ಎಂದು ಶಾಸಕರು
ಮಾಡಿದ ಮನವಿಗೆ ಪ್ರತಿಕ್ರಿಯಿಸಿದ
ಸಾರಿಗೆ ಸಚಿವರು ಹೊಸ
ಬಸ್ ನಿಲ್ದಾಣಕ್ಕೆ ಜಾಗ
ಒದಗಿಸಿಕೊಟ್ಟರೆ ಕೊವಿಡ್19
ಸಂಕಷ್ಟದಿಂದ ಎಲ್ಲಾ ತಿಳಿಯಾದ
ನಂತರ ಬಸ್ ನಿಲ್ದಾಣ
ನಿರ್ಮಿಸಿಕೊಡುವ ಭರವಸೆ ನೀಡಿದರು.

ಶಾಸಕ ಟಿ.ವೆಂಕಟರಮಣಯ್ಯ
ಮಾತನಾಡಿ,ಸಾರಿಗೆ ಸಂಸ್ಥೆಯಿಂದ
ಇಂದು ಉದ್ಘಾಟನೆಯಾಗಿರುವ ನೂತನ
ಬಸ್ ನಿಲ್ದಾಣ ನನ್ನ
ಕನಸಿನ ಬಸ್ ನಿಲ್ದಾಣವಾಗಿದ್ದು,
ನಿಲ್ದಾಣಕ್ಕೆ ಜಾಗ
ಒದಗಿಸಲು ಹೆಚ್ಚು ಶ್ರಮ
ಪಡೆಬೇಕಾಯಿತು ಹಿಂದೆ
ಮಾಜಿ ಸಚಿವ ಆರ್.ಎಲ್. ಜಾಲಪ್ಪ
ಅವರು ಅಂದಿನ ಮುಖ್ಯಮಂತ್ರಿ
ಜೆ.ಎಚ್.ಪಟೇಲ್
ಅವರಿಗೆ ಕೆಇಬಿ ಜಾಗವನ್ನು
ತೆರವು ಮಾಡುವ ಬಗ್ಗೆ
ಮಾಡಿದ್ದ ಮನವಿ ತಿರಸ್ಕಾರವಾಗಿತ್ತು.
ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ,
ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ
ಬೆಸ್ಕಾಂಗೆ ಬೇರೆ ಕಡೆ
ಜಾಗ ನೀಡಿ,
ಜಾಗದಲ್ಲಿ ಬಸ್ ನಿಲ್ದಾಣ
ಮಾಡುವ ಒಪ್ಪಂದವಾಯಿತು. ನಗರಸಭೆಗೆ
20 ಅಂಗಡಿಗಳ ಜಾಗ
ನೀಡಲಾಗಿದೆ ಎಂದು ಸ್ಮರಿಸಿದರು.
ಆದರೆ ಬೆಳೆಯುತ್ತಿರುವ ತಾಲೂಕಿಗೆ
ಬಸ್ ನಿಲ್ದಾಣ
ಸಾಲದಾಗಿದ್ದು,ಹಳೇ ಬಸ್
ನಿಲ್ದಾಣದ ಅಭಿವೃದ್ದಿಗೆ ಸಚಿವರು
1 ಕೋಟಿ ರೂ
ಬಿಡುಗಡೆ ಮಾಡಬೇಕಿದೆ.ಇನ್ನೂ
2 ಎಕರೆ ಜಾಗದಲ್ಲಿ
ದೊಡ್ಡ ಬಸ್ ನಿಲ್ದಾಣ
ಮಾಡುವ ಯೋಜನೆಯಿದ್ದು,ಸಾರಿಗೆ
ಸಚಿವರು ಮಂಜೂರು ಮಾಡಬೇಕೆಂದು
ಮನವಿ ಮಾಡಿದರು.

ತಾಲೂಕಿನಲ್ಲಿ 30 ಸಾವಿರಕ್ಕೂ
ಹೆಚ್ಚು ನೇಕಾರರಿದ್ದು,ಕೊರೊನಾ
ಪರಿಣಾಮ ನೇಕಾರಿಕೆ ನೆಲ
ಕಚ್ಚಿದ್ದು,ನೇಕಾರರು ಸಂಕಷ್ಟದಲ್ಲಿದ್ದಾರೆ. ದಿಸೆಯಲ್ಲಿ
ನೇಕಾರರಿಗೆ ಆಂಧ್ರ, ತಮಿಳುನಾಡು
ರೀತಿಯಲ್ಲಿ ನೇಕಾರರಿಗೆ ನೆರವು
ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ದ್ಡೊಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಸಾರಿಗೆ ಇಲಾಖೆಯ ಚಿಕ್ಕಬಳ್ಳಾಪುರ ವಿಭಾಗದ ನಿಯಂತ್ರಣಾಕಾರಿ ಡಿ.ವಿ.ಬಸವರಾಜ್, ಮುಖ್ಯ ಅಭಿಯಂತರ ಜಗದೀಶ್ ಚಂದ್ರ, ದೊಡ್ಡಬಳ್ಳಾಪುರ ಘಟಕ ವ್ಯವಸ್ಥಾಪಕ ಎಂ.ಬಿ.ಆನಂದ್, ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಮನೋಹರ್ ಮತ್ತಿತರರು ಭಾಗವಹಿಸಿದ್ದರು.

Exit mobile version