Site icon Harithalekhani

ಭಾನುವಾರದ ಲಾಕ್ ಡೌನ್ ಗೆ ದೊಡ್ಡಬಳ್ಳಾಪುರ ನಗರದಲ್ಲಿ ಉತ್ತಮ ಪ್ರತಿಕ್ರಿಯೆ

ದೊಡ್ಡಬಳ್ಳಾಪುರ: ಕರೊನ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ವುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಾರಿಗೊಳಿಸಿರುವ ಭಾನುವಾರ ಒಂದು ದಿನದ ಲಾಕ್ ಡೌನ್ ಗೆ ದೊಡ್ಡಬಳ್ಳಾಪುರ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊಂಗಾಡಿಯಪ್ಪ ಬಸ್ ನಿಲ್ದಾಣ,ತಾಲೂಕು ಕಚೇರಿ ವೃತ್ತ,ಮಾರುಕಟ್ಟೆ,ಮಹಾತ್ಮ ಗಾಂಧಿ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ,ಬಸವ ಭವನದ ವೃತ್ತ,ಟಿಬಿ ವೃತ್ತ,ಡಿಕ್ರಾಸ್ ವೃತ್ತ ಸೇರಿದಂತೆ ನಗರದ ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಕೆಲವೆಡೆ ಸಣ್ಣ ಪುಟ್ಟ ಅಂಗಡಿಗಳು ತೆರೆದಿದ್ದು‌ ಮತ್ತೆ ಕೆಲವರು ಬಂದ್ ಮಾಡುತ್ತಿದ್ದಾರೆ.

ಪ್ರಯಾಣಿಕ ಆಟೋಗಳು ಆಲ್ಲೊಂದು, ಇಲ್ಲೊಂದು ಸಂಚರಿಸುತ್ತಿರುವುದು ಬಿಟ್ಟರೆ ಎಲ್ಲ ರೀತಿಯ ಪ್ರಯಾಣಿಕ ವಾಹನಗಳು ಸ್ಥಗಿತಗೊಂಡಿವೆ.ಸಾರಿಗೆ ಬಸ್ ಗಳು ಬಸ್ ನಿಲುಗಡೆಯಾಗಿ ಸಂಚಾರ ಸ್ಥಗಿತಗೊಳಿಸಿವೆ.

ಪೊಟೋ: ಆನಂದ್ / ಮುತ್ತಣ್ಣ

Exit mobile version