Site icon Harithalekhani

ಕರೊನಾ ಪರಿಣಾಮ ಆಷಾಢ ಏಕಾದಶಿ ಸರಳ

ದೊಡ್ಡಬಳ್ಳಾಪುರ: ಕೊವಿಡ್-19 ಪರಿಣಾಮದಿಂದಾಗಿ ಈ ಬಾರಿ ಆಷಾಢ ಏಕಾದಶಿ ಆಚರಣೆ ಸರಳವಾಗಿ ನಡೆಯಿತು. ನಗರದಲ್ಲಿ ಮಧ್ಯಾಹ್ನದ ನಂತರ ಲಾಕ್‌ಡೌನ್ ಘೋಷಿಸಿದ್ದರಿಂದ ಜನ ಸಂಚಾರ ಕಡಿಮೆಯಾಗಿ,ದೇವಾಲಯಗಳಲ್ಲಿ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು.

ತಾಲೂಕಿನ ಪಾಲನಜೋಗಿಹಳ್ಳಿಯಲ್ಲಿರುವ ಪ್ರಸಿದ್ದ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶ್ರೀ ಪಾಂಡುರಂಗಸ್ವಾಮಿ ಭಕ್ತ ಮಂಡಲಿ ವತಿಯಿಂದ ಆಷಾಢ ಶುದ್ಧ ಏಕಾದಶಿ ಅಂಗವಾಗಿ 61 ನೇ ವರ್ಷದ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಕರೊನಾ ಹಿನ್ನಲೆಯಲ್ಲಿ ಸೀಮಿತ ಭಕ್ತಾದಿಗಳೊಂದಿಗೆ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪಾಂಡುರಂಗಸ್ವಾಮಿಗೆ ಪಂಚಾಮೃತಾಭಿಷೇಕ ನಡೆಯಿತು. 

ಪ್ರಥಮ ಏಕಾದಶಿ ಅಂಗವಾಗಿ ನಗರದ ಬೆಸ್ತರಪೇಟೆಯಲ್ಲಿರುವ ಪಾಂಡುರಂಗಸ್ವಾಮಿ ದೇವಾಲಯದಲ್ಲಿ  ಅಭಿಷೇಕ, ಪೂಜಾ ಕಾರ್ಯಕ್ರಮ ಸರಳವಾಗಿ ನಡೆಯಿತು.

Exit mobile version