ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯ ಚೈತನ್ಯನಗರದ 4ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರಿಗೆ ಕರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದ್ದು,ಶನಿವಾರದ ಬುಲೆಟಿನ್ ಲ್ಲಿ ಮಾಹಿತಿ ಬರಲಿದೆ ಎಂದು ವೈದ್ಯಕೀಯ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಸುಮಾರು 60 ವರ್ಷದ ಮಹಿಳೆಯೊಬ್ಬರಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಬೆಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕುಟುಬಂದವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಆಸ್ಪತ್ರೆಯಲ್ಲಿ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.
48,42ವಯಸ್ಸಿನ ಸೋಂಕಿತ ಇಬ್ಬರನ್ನು ಆಸ್ಪತ್ರೆಗೆ ಶುಕ್ರವಾರ ರಾತ್ರಿ ದಾಖಲಿಸಲಾಗಿದೆ.ಕುಟುಂಬದ ಇತರರನ್ನು ಕ್ವಾರಂಟೈನ್ ಮಾಡಲಾಗಿದೆ.ಚೈತನ್ಯ ನಗರದ 2ನೇ ಕ್ರಾಸ್ ನಿಂದ 7ನೇ ಕ್ರಾಸ್ ವರೆಗಿನ ರಸ್ತೆಯನ್ನು ಶುಕ್ರವಾರ ರಾತ್ರಿಯಿಂದಲೇ ಸೀಲ್ ಡೌನ್ ಮಾಡಲಾಗಿದೆ.
ದೊಡ್ಡಬಳ್ಳಾಪುರ ನಗರದಲ್ಲಿ ಕೋವಿಡ್ -19 ಇದೇ ಪ್ರಥಮ ಪ್ರಕರಣವಾಗಿದೆ.
ಕರೊನಾ ಚಿಕಿತ್ಸೆ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಆರಂಭ
ಬೆಂಗಳೂರಿನ ಕರೊನಾ ಚಿಕಿತ್ಸಾ ಕೇಂದ್ರಗಳಾದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ್ ಆಸ್ಪತ್ರೆಗಳಲ್ಲಿ ಜಾಗವಿಲ್ಲದ ಕಾರಣ,ಸರ್ಕಾರದ ಆದೇಶದ ಮೇರೆ ಈ ಮುಂಚೆಯೇ ಸಿದ್ದತೆ ಕೈಗೊಂಡಂತೆ ದೊಡ್ಡಬಳ್ಳಾಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ಇಂದಿನಿಂದ ಆರಂಭವಾಗುತ್ತಿದೆ.ಇಂದಿನಿಂದ ದೊಡ್ಡಬಳ್ಳಾಪುರ ಕರೊನಾ ಸೋಂಕಿತರಿಗೆ ದೊಡ್ಡಬಳ್ಳಾಪುರದಲ್ಲಿಯೇ ಚಿಕಿತ್ಸೆ ದೊರಲಿದೆ ಎನ್ನುತ್ತವೆ ವೈದ್ಯಕೀಯ ಇಲಾಖೆಯ ಮೂಲಗಳು.