Site icon Harithalekhani

ತಂದೆಯ ಬೆನ್ನಲ್ಲೆ ಸುಧಾಕರ್ ಪತ್ನಿ,ಮಗಳಿಗೂ ಕರೊನಾ ಸೋಂಕು ದೃಢ

ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಂದೆಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಸೋಮವಾರ ಸುಧಾಕರ್ ಟ್ವಿಟ್ ಮೂಲಕ ಖಚಿತ ಪಡಿಸಿದ್ದರು.ಆದರೆ ಇದರ ಬೆನ್ನಲ್ಲೆ ಪತ್ನಿ ಹಾಗೂ ಮಗಳಿಗೂ ಸೋಂಕು ತಗುಲಿದೆ ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ.

ಸುಧಾಕರ್ ತಂದೆಯವರಿಗೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಮಾದರಿಯನ್ನು ಸಂಗ್ರಹಿಸಿ,ಪರೀಕೆಗೆ ಕಳುಹಿಸಲಾಗಿದ್ದು,ವರದಿಯಲ್ಲಿ ಪತ್ನಿ ಹಾಗೂ ಮಗಳಿಗೆ ಕರೊನಾ ಸೋಂಕು ದೃಡಪಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.

ಸುಧಾಕರ್ ಟ್ವಿಟ್

ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

Exit mobile version