Site icon Harithalekhani

ಯೋಗದಿಂದ ಜೀವನದ ಯೋಗ್ಯತೆ ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ.

ನಿಮ್ಮ ಮನೆ ಹಾಗೂ ಕುಟುಂಬದೊಂದಿಗೆ ಯೋಗ ಆಚರಿಸಿ.ಯೋಗದಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಕೊರೊನಾ ವಿರುದ್ಧ ಹೋರಾಟ ಮಾಡಬಹುದು.ಆದ್ದರಿಂದ ಆರೋಗ್ಯ ವೃದ್ಧಿಗೆ ಯೋಗ ಬಹು ಮುಖ್ಯ. ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯವಾಗಿದೆ. ಅಲ್ಲದೇ ಈ ಮಾರಕ ಕರೊನಾ ಶ

ಸೋಂಕು ಹೋಗಲಾಡಿಸಲು ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.

ಉಸಿರಾಟ ವ್ಯವಸ್ಥೆಗೆ ಯೋಗ ಬಲ ನೀಡುತ್ತದೆ. ದಿನನಿತ್ಯ ಯೋಗ ಮಾಡಿ ಎಂದು ನಾನು ಈ ವೇಳೆ ಆಗ್ರಹಿಸುತ್ತೇನೆ. ಅಲ್ಲದೇ ಯೋಗದಿಂದ ಜೀವನದಲ್ಲಿ ಯೋಗ್ಯತೆ ಹೆಚ್ಚುತ್ತೆ. ಜೊತೆಗೆ ಕೆಲಸಗಳನ್ನ ಶಿಸ್ತುಬದ್ಧವಾಗಿ ಮಾಡುವುದೇ ಯೋಗವಾಗಿದೆ.ನಿಯಮಬದ್ಧವಾಗಿ ಕೆಲಸ ಮಾಡುವುದು ಕೂಡ ಯೋಗ ಎಂದು ಮೋದಿ ಯೋಗದ ಮಹತ್ವವನ್ನು ತಿಳಿಸಿದ್ದಾರೆ.

Exit mobile version