Site icon Harithalekhani

ಹೂವು ಬೆಳಗಾರರು ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ದೊಡ್ಡಬಳ್ಳಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ಹೂವು ಬೆಳೆದ ರೈತರಿಗೆ ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟವಾಗಿದ್ದು, ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಹೂ ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿ ಕರ್ನಾಟಕ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಆಧರಿಸಿ ಪರಿಹಾರಧನ ನೀಡಲಾಗುತ್ತಿದೆ. 

ಸದರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೌತಿಕ 1821 ಹೆಕ್ಟೇರ್ ಹಾಗೂ ಆರ್ಥಿಕ ರೂ.473.15 ಲಕ್ಷಗಳ ಗುರಿ ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಈಗಾಗಲೇ ಬೆಳೆ ಸಮೀಕ್ಷೆಯಲ್ಲಿರುವ ಎಫ್‌ಐಡಿ(FID) ಸಂಖ್ಯೆ ಹೊಂದಿರುವ ಮತ್ತು ಎಫ್‌ಐಡಿ(FID) ಸಂಖ್ಯೆ ಹೊಂದಿಲ್ಲದಿರುವ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಎಫ್‌ಐಡಿ(FID) ಸಂಖ್ಯೆ ಹೊಂದಿಲ್ಲದ ರೈತರು ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಎಫ್‌ಐಡಿ(FID) ಯನ್ನು ಸೃಷ್ಟಿಸಲು ಅರ್ಜಿ ದಿನಾಂಕ ವಿಸ್ತರಿಸಲಾಗಿದೆ. 

ಬೆಳೆ ಸಮೀಕ್ಷೆಯಲ್ಲಿರುವ ಎಫ್‌ಐಡಿ(FID) ಸಂಖ್ಯೆ ಹೊಂದಿಲ್ಲದ ರೈತ ಫಲಾನುಭವಿಗಳು ಅರ್ಜಿಯೊಂದಿಗೆ ಆರ್‌ಟಿಸಿ(RTC), ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕದ ಮತ್ತು ರೇಷನ್ ಕಾರ್ಡ್ ಪ್ರತಿ ಪಾಸ್ ಪೋರ್ಟ್ ಅಳತೆಯ ಒಂದು ಭಾವಚಿತ್ರದೊಂದಿಗೆ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆಗೆ 2020ರ ಜೂನ್ 26 ರೊಳಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9448001644, ತಾಂತ್ರಿಕ ಸಹಾಯಕರು ಮೊ.ಸಂ.: 9886736664, ಕಚೇರಿ  ದೂ.ಸಂ.: 080 27681204. ದೊಡ್ಡಬಳ್ಳಾಪುರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9632410677, ತಾಂತ್ರಿಕ ಸಹಾಯಕರು ಮೊ.ಸಂ.: 9741895988, ಕಚೇರಿ  ದೂ.ಸಂ.: 080 27623770. ಹೊಸಕೋಟೆ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9538953949, ತಾಂತ್ರಿಕ ಸಹಾಯಕರು ಮೊ.ಸಂ.: 8453966868, ಕಚೇರಿ  ದೂ.ಸಂ.: 080 29716626. ಹಾಗೂ ನೆಲಮಂಗಲ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9901754339, ತಾಂತ್ರಿಕ ಸಹಾಯಕರು ಮೊ.ಸಂ.: 9980276248, ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ) ಮಾಹಾಂತೇಶ ಮುರಗೋಡ (ಮೊ.ಸಂ.: 9448999214) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version