ದೊಡ್ಡಬಳ್ಳಾಪುರ: ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಹಿಂದು ಜಾಗರಣ ವೇದಿಕೆ ವತಿಯಿಂದ ನಗರದ ಮುತ್ಯಾಲಮ್ಮ ದೇವಾಲಯದ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್,ಮಹಿಳಾ ಸುರಕ್ಷಾ ಪ್ರಮುಖ್ ಶಾಜಿ,ಜಿಲ್ಲಾ ಸಂಪರ್ಕ ಪ್ರಮುಖ್ ರಾಮ್ ರೆಡ್ಡಿ, ತಾಲೂಕು ಸಂಯೋಜಕ ನಿವೃತ್ತ ಯೋಧ ಶಿವಕುಮಾರ್, ನಗರ ಕಾರ್ಯದರ್ಶಿಗಳಾದ ಮಂಚಿನಬೆಲೆ ಚಂದ್ರು,ಗುಣಸಾಗರ್,ಕಾರ್ಯಕರ್ತರಾದ ವಾಸು,ಅಮರ್,ಚಂದನ್,ನರೇಂದ್ರ, ರಮೇಶ್,ಸುಬ್ರಹ್ಮಣ್ಯಿ,ಖಾಸ್ ಬಾಗ್ ವಾಸು ಮತ್ತಿತರಿದ್ದರು.