Site icon Harithalekhani

ನನ್ನ ಆತ್ಮದ ಅರ್ಧ ಭಾಗ,ಚಿರು – ಮೇಘನಾಸರ್ಜಾ

ದೊಡ್ಡಬಳ್ಳಾಪುರ: ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲಿ ಮೌನಕ್ಕೆ ಶರಣಾಗಿದ್ದ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಇಂದು ಇನ್ ಸ್ಟಾಗ್ರಾಮ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇಂದು ಚಿರುಸರ್ಜಾರೊಂದಿಗಿನ ಪೋಟೋ ಅಂಟಿಸಿ ಭಾವನಾತ್ಮಕ ಸಾಲುಗಳನ್ನು ಪೋಸ್ಟ್ ಮಾಡಿರುವ ಅವರು.ಚಿರು,ಬಾರಿ ಬಾರಿ ಎಷ್ಟು ಬಾರಿ ಪ್ರಯತ್ನಿಸಿದರು ನನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿತಿ ನನ್ನದು. ನಿನ್ನ ಮೇಲಿನ ಪ್ರೀತಿ,ಹುಚ್ಚುವಿಶ್ವಾಸದ ಬಗ್ಗೆ ಮಾತನಾಡಲು ಶಬ್ದಕೋಶದಲ್ಲಿ ಪದಗಳೆ ಸಾಲುತ್ತಿಲ್ಲ.ನನ್ನ ಸ್ನೇಹಿತ,ನನ್ನ ಪ್ರೇಮಿ,ನನ್ನ ಹಿತೈಷಿ,ನನ್ನ ಮಗು,ನನ್ನ ಸರ್ವಸ್ವ,ನನ್ನ ಪತಿ – ನೀನು ಇದೆಲ್ಲಕ್ಕಿಂತ ಹೆಚ್ಚು.ನೀನು ನನ್ನ ಆತ್ಮದ ಅರ್ಧ ಭಾಗ,ಚಿರು.

ಪ್ರತಿ ದಿನ ನಮ್ಮ ಮನೆಯ ಬಾಗಿಲು ನೋಡುತ್ತಾ ಅಗೋ ನೀ ಬಂದೇಬಿಟ್ಟೆ, ನಾ ಮನೆಗೆ ಬಂದೆ ಅಂತ ಹೇಳುತ್ತ ನೀನು ಬಂದೇಬಿಡುವೆ ಎಂಬ ಒಂದು ಆಸೆ.ನೀನು ಬರದಿದ್ದಾಗ ನನ್ನ ಅಥ್ಮವನ್ನೆ ಸುಡುವಂತ ಒಂದು ನೋವು ನನ್ನಲ್ಲಿ.ಪ್ರತಿದಿನದ ಪ್ರತಿ ಕ್ಷಣ ನಿನ್ನನ್ನು ಸ್ಪರ್ಶಿಸಲಾಗದೆ ನನ್ನ ಕಾಲ್ಗೆಳಗಿನ ಭೂಮು ಕುಸಿಯುವಂತೆ ಒಂದು ನಡುಕ.ಸಾವಿರ ಬಾರಿ ನಿಧಾನವಾಗಿ ನೋವಿನಿಂದ ಸಾಯುವಂತೆ.ಆದರೆ ಪ್ರತಿ ಬಾರಿ ನಾನು ನೋವುಂಡಾಗ,ಪ್ರತಿ ಬಾರಿ ನಾನು ಕಣ್ಣೀರು ಹಾಕಿದಾಗ,ದೈವತೀತ ಅದ್ಬುತದಂತೆ ನೀನು ಇಲ್ಲೆ ನನ್ನ ಸುತ್ತ,ನಿನ್ನ ಪ್ರೀತಿಯ ರಕ್ಷಾಕವಚದಲ್ಲಿ ಆರೈಕೆ ಮಾಡುತ್ತಿರುವ ಭಾವನೆ ನನಗೆ.ಸದಾ ಕಾಲ ನನ್ನ ರಕ್ಷಿಸುತ್ತಿರುವ ಕಾವಲುದೈವ. ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ನಟ ಚಿರು ಅಗಲಿಕೆ ಸರ್ಜಾ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಾಕಷ್ಟು ನೋವನ್ನು ಉಂಟುಮಾಡಿದ್ದು,ಬುಧವಾರವಷ್ಟೆ ಚಿರು ಮಾವ ಅರ್ಜುನ್ ಸರ್ಜಾ ವಿಡಿಯೋ ಮೂಲಕ ತಮ್ಮ ಮನದಾಳದ ಮಾತನನ್ನು ಹಂಚಿಕೊಂಡಿದ್ದು.ಈ ಸಂದರ್ಭದಲ್ಲಿ ನೆನಯಬಹುದು.

Exit mobile version