Site icon Harithalekhani

ನಾಳೆ (ಜೂನ್ 18) ಮಾಸ್ಕ್ ದಿನ

ಬೆಂಗಳೂರು : ಜೂನ್.18ರಂದು ಪಾದಯಾತ್ರೆ ಮೂಲಕ ಮಾಸ್ಕ ದಿನವನ್ನು ಆಚರಿಸಿ ಜನಜಾಗೃತಿ ಮೂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಆದೇಶಿಸಿದ್ದಾರೆ.

ಕೋವಿಡ್ – 19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನ ಪಾಲಿಸುವುದು ಕಡ್ಡಾಯವಾಗಿದೆ.ಈ ಸೋಂಕು ನಿಯಂತ್ರಿಸಲು ಮುಖಗವುಸು(ಮಾಸ್ಕ್) ಧರಿಸುವುದು,ಸೋಪಿನಿಂದ ಕೈ ತೊಳೆಯುವುದು,ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾದ ವೈದ್ಯಕೀಯೇತರ ಪಾಲನೆಯಾಗಿದೆ.

ಈ ಕುರಿತು ಜನ ಸಮುದಾಯದಲ್ಲಿ  ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರ ಜೂನ್ 18ರ ಗುರುವಾರದಂದು ಮಾಸ್ಕ್ ದಿನವನ್ನಾಗಿ ಘೋಷಿಸಲು ನಿರ್ಧರಿಸಿದೆ.

ಈ ದಿನ ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಜನ ಪ್ರತಿನಿಧಿಗಳು,ಗಣ್ಯ ವ್ಯಕ್ತಿಗಳು,ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಲು ಸೂಚಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,50ಕ್ಕು ಹೆಚ್ಚು ಜನ ಭಾಗವಹಿಸದಿರುವುದು,ಪಾದಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತಿತರ ಸೂಚನೆ ನೀಡಿದ್ದಾರೆ.

Exit mobile version