Site icon Harithalekhani

LKGಯಿಂದ 7ನೇ ತರಗತಿವೆರೆಗೆ ಆನ್​ಲೈನ್​ ಕ್ಲಾಸ್​ ರದ್ದು: ಮಾಧುಸ್ವಾಮಿ

ಬೆಂಗಳೂರು : ಎಲ್​ಕೆಜಿಯಿಂದ 5ನೇ ತರಗತಿ ತನಕ ಆನ್​ಲೈನ್​ ತರಗತಿ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದ ಬೆನ್ನಲ್ಲೇ. ಇಂದು ಮತ್ತೆ ಸರ್ಕಾರ ತನ್ನ ನಿರ್ಧಾರ ಬದಲಿಸಿದ್ದು 5ನೇ ತರಗತಿ ತನಕವಲ್ಲದೆ 7ನೇ ತರಗತಿ ತನಕ ಆನ್​ಲೈನ್ ಕ್ಲಾಸ್ ರದ್ದು ಮಾಡಲು ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು 1 ರಿಂದ 5 ರವರೆಗೆ ಆನ್​ಲೈನ್ ಶಿಕ್ಷಣ ಬೇಡ ಎಂದು ಈ ಮೊದಲು ನಿರ್ಧರಿಸಲಾಗಿತ್ತು.ಇಂದು ಮತ್ತೆ ಚರ್ಚೆ ಬಳಿಕ ಈ ರದ್ದತಿಯನ್ನು 7ನೇ ತರಗತಿ ತನಕ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಳಿದಂತೆ ಈ ಮೊದಲೆ ನಿರ್ಧರಿಸಿದಂತೆ SSLC ಪರೀಕ್ಷೆ ನಡೆಯಲಿದೆ. 8 ಹಾಗೂ 9 ತರಗತಿಯವರಿಗೆ ಆನ್ ಲೈನ್ ಕ್ಲಾಸ್ ನಡಿತಿದೆ .ಇದನ್ನೂ ನಿಲ್ಲಿಸಬೇಕಾ, ಬೇಡ್ವಾ? ಅನ್ನೊದ್ರ ಚರ್ಚೆ ನಡೆದಿದೆ ಎಂದಿದ್ದಾರೆ.

*************************

Exit mobile version