ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿ ಚಿಲ್ಲರೆ ಅಂಗಡಿಯೊಂದರಲ್ಲಿ ಖರೀದಿ ಮಾಡಿದ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಗ್ರಾಮದಲ್ಲಿ ಅಕ್ರಮ ಮದ್ಯ ಮರಾಟಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಅಂಗಡಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಮೃತನನ್ನು ನಾಗರಾಜ್ (40)ಎಂದು ಗುರುತಿಸಲಾಗಿದೆ.ಅಂಗಡಿಯಲ್ಲಿ ಖರೀದಿಸಿದ ಮದ್ಯ ಸೇವಿಸಿ ಮೃತಪಟ್ಟಿದ್ದು,ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ಸಂಬಂಗಳು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಾಡೋನಹಳ್ಳಿ ಗ್ರಾಮದ ಕೆಲ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಮಿತಿಮೀರಿದ್ದು,ಮದ್ಯ ಸೇವನೆಯಿಂದಾಗಿ ಜನತೆ ಹಾದಿ ತಪ್ಪುತ್ತಿದ್ದಾರೆ. ಅಲ್ಲದೇ ಮಹಿಳೆಯರು ಮಕ್ಕಳು ಗ್ರಾಮಗಳಲ್ಲಿ ಓಡಾಡಲು ಮುಜುಗರವಾಗುತ್ತಿದೆ.ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ನಾರಾಯಣಪ್ಪ ಆಗ್ರಹಿಸಿದರು.
ಈ ವೇಳೆ ಮಾಜಿ ಸದಸ್ಯ ನಾಗರಾಜ್, ಕನ್ನಡ ಯುವಕ ರೈತ ಸಂಘದ ಕಾಮತ ಕುಮಾರ್, ಗ್ರಾಮಸ್ಥರಾದ ಭಾಗ್ಯಮ್ಮ, ಗೋಪಮ್ಮ,ಲಕ್ಷ್ಮಮ್ಮ, ಸುಬ್ರಮಣಿ, ಹರೀಶ್, ಮಂಜುನಾಥ್,ರಾಮಾಂಜಿ ಮತ್ತಿತರಿದ್ದರು.
*********