ಬೆಂಗಳೂರು : UKG, LKG ಮತ್ತು ಐದನೆಯ ತರಗತಿಯ ವರೆಗೆ ಆನ್-ಲೈನ್ ಶಿಕ್ಷಣ ನೀಡುವುದನ್ನು ನಿಲ್ಲಿಸಲು ಮಾತ್ರ ಸರ್ಕಾರ ನಿರ್ಧರಿಸಿದ್ದು.ಏಳನೆ ತರಗತಿವರೆಗೆ ಆನ್ಲೈನ್ ತರಗತಿ ರದ್ದು ಕೇವಲ ಸಚಿವರ ಸಲಹೆ ಮಾತ್ರ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಏಳನೆ ತರಗತಿಯವರೆಗೆ ಆನ್ಲೈನ್ ಶಿಕ್ಷಣ ರದ್ದು ಕುರಿತು ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ಬೆನ್ನಲ್ಲೆ ಸ್ಪಷ್ಟಣೆ ನೀಡಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್.
ಇಂದು ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಆನ್-ಲೈನ್ ಶಿಕ್ಷಣ ನಿಲ್ಲಿಸುವ ಈ ನಿರ್ಧಾರವನ್ನು ಏಳನೆಯ ತರಗತಿಯವರೆಗೆ ವಿಸ್ತರಿಸಬೇಕೆಂದು ಸಲಹೆ ನೀಡಿದ್ದು ಅದು ಸಲಹೆ ಮಾತ್ರವೇ ಹೊರತು ಆದೇಶವಲ್ಲ.
ಆನ್-ಲೈನ್ ಶಿಕ್ಷಣ ನೀಡುವುದನ್ನು LKG, UKG ಮತ್ತು ಪ್ರಾಥಮಿಕ ಹಂತದ ಐದನೆಯ ತರಗತಿವರೆಗೆ ನಿಲ್ಲಿಸುವುದು ಸರ್ಕಾರದ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.
” ಮಾಧುಸ್ವಾಮಿ ಮಾಡಿದ ಎಡವಟ್ಟು “
ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸಂಪುಟದಲ್ಲಿ ಆನ್‌ಲೈನ್ ತರಗತಿಯ ಬಗ್ಗೆ ಚರ್ಚೆ ನಡೆಯಿತು. 7ನೇ ತರಗತಿಯವರೆಗಿನ ಆನ್‌ಲೈನ್ ಶಿಕ್ಷಣವನ್ನು ರದ್ದು ಮಾಡುವಂತೆ ಸಚಿವರು ಒತ್ತಾಯಿಸಿದರು. ಹೀಗಾಗಿ ಎಲ್ಲ ಮಾದರಿಯ ಪಠ್ಯ ಬೋಧಿಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿರುವ 7ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು
*******