ದೊಡ್ಡಬಳ್ಳಾಪುರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮವತಿಯಿಂದ ಪರಿಸರ ಮತ್ತು ಪರಿಷತ್ತು ಎಂಬ ವಿನೂತನ ಕಾರ್ಯಕ್ರಮವನ್ನು ತಾಲೂಕಿನ ಶ್ರೀ ಕ್ಷೇತ್ರ ಘಾಟಿಸುಬ್ರಮಣ್ಯ ದೇವಸ್ಥಾನದ ರಸ್ತೆಯಲ್ಲಿನ ಸಾಯಿ ಬಾಬಾ ಮಂದಿರದ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯುತ್ ಗುತ್ತಿಗೆದಾರ ಕುಮಾರ್,ಮಾನವ ತನ್ನ ಎಲ್ಲಾ ಅನುಕೂಲಕ್ಕಾಗಿ ಪರಿಸರವನ್ನು ಬಳಸಿಕೊಳ್ಳುವುದು ಮತ್ತು ನಾಶಮಾಡುವುದರ ಮೂಲಕ ದ್ರೋಹ ಬಗೆಯುತ್ತಿರುವುದು ಪರಿಸರಕ್ಕೆ ಬಗೆದ ದ್ರೋಹವಾಗಿದೆ.ರಸ್ತೆಗಳ ಅಗಲೀಕರಣದ ನೆಪಕ್ಕೆ ಬಲಿಯಾದ ಮರಗಳ ಮರುಹುಟ್ಟು ಕಾಣದಿರುವುದು ವಿಪರ್ಯಾಸ ಎಂದರು .
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರಮೀಳಮಹಾದೇವ್,ವಿಶ್ವ ಪರಿಸರ ದಿನಾಚಾರಣೆ ಒಂದು ದಿನಕ್ಕೆ,ಒಂದು ಗಿಡ ನೆಡುವುದಕ್ಕೆ ನಾವು ಸೀಮಿತ ಗೊಳಿಸಬಾರದು. ಪ್ರತಿ ಕ್ಷಣವೂ ನಮಗೆ ವಿಶ್ವ ಪರಿಸರ ದಿನವೇ ಆಗಿರುತ್ತದೆ.ನಾವು ಪರಿಸರಕ್ಕೆ ಪೂರಕವಾಗಿ ಮಾಡುವ ಪ್ರತಿಯೊಂದು ಕಾರ್ಯವೂ ಪರಿಸರ ದಿನಾಚರಣೆ ಆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಕಸಾಪ ಅಧ್ಯಕ್ಷ ಬಿ.ಪಿ. ಹರಿಕುಮಾರ್ ಅಧ್ಯಕ್ಷತೆ ವಹಿಸಿದ್ದು,ನಗರ ಕಸಾಪ ಉಪಾಧ್ಯಕ್ಷ ಸೂರ್ಯನಾರಾಯಣ್,ಕಸಾಪ ಗೌರವ ಕಾರ್ಯದರ್ಶಿ ಡಿ.ಈ. ಶಿವಕುಮಾರ್,ಕವಿ ಪಾಲ್ ಪಾಲ್ ದಿನ್ನೆ ವೆಂಕಟೇಶ್,ಜಯಲಕ್ಷ್ಮಿ ,ಜೆ.ಸಿ.ರಾಮಕೃಷ್ಣ,ಡಿ.ಆರ್.ಕೃಷ್ಣ,ಪ್ರವೀಣ್ ಶಾಂತಿನಗರ,ರಾಕೇಶ್,ಮಂಜುನಾಥ್,ಲಕ್ಷ್ಮೀ ಕುಶಲ್,ಡಿ.ವಿ.ಹೊನ್ನೂರಪ್ಪ ಮುಂತಾದವರು ಭಾಗವಹಿಸಿದ್ದರು .