Site icon Harithalekhani

ಅಶಕ್ತರಿಗೆ ಪಡಿತರ ಕಿಟ್,ಮಾಸಾಶನ ವಿತರಿಸಿದ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ

ದೊಡ್ಡಬಳ್ಳಾಪುರ : ಶ್ರೀ ನಗರೇಶ್ವರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಪಡಿತರ ಕಿಟ್ ಹಾಗೂ ಮಾಸಾಶನ ವಿತರಣೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಚಾಲನೆ ನೀಡಿದರು.

ನಗರದ ಶ್ರೀ ನಗರೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿಟ್ ಹಾಗೂ ಮಾಸಾಶನ ವಿತರಿಸಿ ಮಾತನಾಡಿದ ಅವರು.

ಟ್ರಸ್ಟ್ ವತಿಯಿಂದ ಅಶಕ್ತರಿಗೆ ಮಾಸಾಶನ ವಿತರಣೆ ಮೂಲಕ ನೆರವಾಗುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ.ಅಲ್ಲದೆ ಕರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರ ಗುರುತಿಸಿ ದಿನಸಿ ಕಿಟ್ ವಿತರಣೆಗೆ ಮುಂದಾಗಿರುವುದು ಮಾನವೀಯ ಕಾರ್ಯ ಎಂದರು.

ಈ ವೇಳೆ ಟ್ರಸ್ಟ್‌ನ ಗೌರವ ಅಧ್ಯಕ್ಷ ಬಿ.ಶಿವಾನಂದಪ್ಪ,ಮಾರ್ಗದರ್ಶಕರಾದ ಎಸ್.ನಟರಾಜ್,ಬಿ.ಸಿ.ಪುಟ್ಟರುದ್ರಪ್ಪ,ಬೇರಿಕೆ ನಾಗಪ್ಪ,ಅಧ್ಯಕ್ಷ ಬೇಕರಿ ಸತೀಶ್,ಕಾರ್ಯದರ್ಶಿ ಶ್ಯಾಮು,ಖಜಾಂಚಿ ರಾಜೇಶ್ ಮತ್ತಿತರಿದ್ದರು.

Exit mobile version