ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಆನ್ಲೈನ್ ಮೂಲಕ ಮೆಕ್ಕೆಜೋಳ ಮತ್ತು ಹೂವು ಬೆಳೆದ ರೈತರಿಗೆ 5 ಸಾವಿರ ಪರಿಹಾರ ಧನದ ಮೊದಲ ಕಂತಾದ 666ಕೋಟಿ ರೂ ಬಿಡುಗಡೆ ಮಾಡಿ ಆನ್ಲೈನ್ ಮೂಲಕ ಪರಿಹಾರ ಯೋಜನೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರು ಸಚಿವರಾಗಿ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ” ದಿನ ನೂರು-ಸಾಧನೆ ಹಲವಾರು” ಶೀರ್ಷಿಕೆಯುಳ್ಳ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.
ನೂರು ದಿನಗಳಲ್ಲಿ ಕೃಷಿ ಸಚಿವರು ಮಾಡಿದ ಸಾಧನೆಗಳು ಇಲಾಖೆಯ ಪ್ರಗತಿ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನಗಳು ಸೇರಿದಂತೆ ನೂರು ದಿನಗಳಲ್ಲಿನಸಾಧನೆಗಳನ್ನು ಹೊತ್ತ ಕಿರುಹೊತ್ತಿಗೆ ” ದಿನನೂರು- ಸಾಧನೆ ಹಲವಾರು” ಇದಾಗಿದೆ.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ತೋಟಗಾರಿಕಾ ಸಚಿವ ಕೆ.ಸಿ ನಾರಾಯಣ ಗೌಡ, ಹಾನಗಲ್ ಶಾಸಕ ಸಿ.ಎಂ ಉದಾಸಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.