ದೊಡ್ಡಬಳ್ಳಾಪುರ : ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಯೋಜನೆ, ಪ್ರೇರಣಾ ಯೋಜನೆ, ಸಮೃದ್ಧಿ ಯೋಜನೆ, ಉನ್ನತಿಯೋಜನೆ, ಐರಾವತ ಯೋಜನೆ, ಸ್ಪೂರ್ತಿ ಯೋಜನೆ, ಪ್ರಬುದ್ಧ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಧಿಯನ್ನು 2020ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಆನ್ಲೈನ್ ಮೂಲಕ ವೈಬ್ಸೈಟ್ www.ksskdc.kar.nic.in ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23221320/080-29781036 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಣ್ಣು, ತರಕಾರಿ ಬೆಳೆಗಳ ನಷ್ಟಕ್ಕೆ ಪರಿಹಾರಧನ
ದೊಡ್ಡಬಳ್ಳಾಪುರ : ಕೋವಿಡ್-19 ನಿಂದಾಗಿ ರಾಜ್ಯಾದ್ಯಾಂತ ಸಂಪೂರ್ಣ ಲಾಕ್ ಡೌನ್ ಆದ ಕಾರಣ ರಾಜ್ಯದಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಹಣ್ಣು ಮತ್ತು ತರಕಾರಿ ಬೆಳೆಗಳ ಕಟಾವು, ಸಾಗಾಣಿಕೆ, ಮಾರಾಟ ಹಾಗೂ ಸಂಸ್ಕರಣೆ ಮಾಡಲು ಸಾಧ್ಯವಾಗಿರುವುದಿಲ್ಲ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಡಿಕೆ ಇಲ್ಲದ ಕಾರಣ ಕೆಲವು ಹಣ್ಣು ಮತ್ತು ತರಕಾರಿ ಬೆಳೆಗಳ ಧಾರಣೆಯಲ್ಲಿ ಕುಸಿತ ಕಂಡುಬಂದಿರುತ್ತದೆ ಅಲ್ಲದೇ ಸಾರಿಗೆ ಅಭಾವದಿಂದ ಹೊರರಾಜ್ಯ ಹಾಗೂ ಹೊರದೇಶಗಳಿಗೂ ಮಾರಾಟ ಮಾಡಲು ಹಿನ್ನೆಡೆಯಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ರಾಜ್ಯದ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಆರ್ಥಿಕವಾಗಿ ಬಹಳ ನಷ್ಟವಾಗಿದ್ದು, ಸದರಿ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಗರಿಷ್ಟ ಒಂದು ಹೆಕ್ಟೇರ್ ಗೆ ರೂ.15.000/- ಮೀರದಂತೆ ಹಾಗೂ ಕನಿಷ್ಟ ರೂ.2000/- ಗಳ ಪರಿಹಾರ ಧನವನ್ನು ನೀಡಲಾಗುವುದು. ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿ ಬೆಳೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರೊರಾಟಾ (PRORATA) ಆಧರಿಸಿ ಗರಿಷ್ಟ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯ, ದ್ರಾಕ್ಷಿ (ಟೇಬಲ್), ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ ಮಾತ್ರ ಮತ್ತು ತರಕಾರಿ ಬೆಳೆಗಳಾದ, ಟೊಮೆಟೋ, ಹಸಿರುಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿಣಕಾಯಿ ಬೆಳಗಳಿಗೆ ಮಾತ್ರ ಪರಿಹಾರಧನ ನೀಡಲಾಗುವುದು.
ಕರ್ನಾಟಕ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ 1019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಯ ಮಾಹಿತಿಯನ್ನು ಆಧರಿಸಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ನೀಡಲಾಗುವುದು. 2019-20 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಹಣ್ಣು ಮತ್ತು ತರಕಾರಿ ಬೆಳೆದ ರೈತರು ಯಾವುದೇ ದಾಖಲಾತಿಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಫಲಾನುಭವಿಯ ಆಯ್ಕೆಯನ್ನು ಹಾಲಿ ಲಭ್ಯವಿರುವ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಯ ಅನುಗುಣವಾಗಿ ಮಾತ್ರ ಪರಿಗಣಿಸಲಾಗುವುದು, ಆದರೆ ಕಲ್ಲಂಗಡಿ ಮತ್ತು ಕರಬೂಜ ಬೇಸಿಗೆ ಬೆಳೆಯಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ನಮೂದಾಗಿಲ್ಲದಿದ್ದರೆ ಅಂತಹ ರೈತರು ಹಾಗೂ ಬಾಳೆ ಹಾಗೂ ಈರುಳ್ಳಿ ಬೆಳೆಗೆ ಸಂಬಂಧಿಸಿದಂತೆ ಮಾರ್ಚ್ 2ನೇ ವಾರದ ನಂತರ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರಧನ ನೀಡಲಾಗುತ್ತಿದ್ದು, ಸದರಿ ಫಸಲಿಗೆ ಒಳಪಡುವ ರೈತರು ಮತ್ತು ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ರೈತರ ಎಫ್ಐಡಿ (FID) ದಾಖಲಾಗದೇ ಇದ್ದಲ್ಲಿ ಫಲಾನುಭವಿವಾರು ಎಫ್ಐಡಿ (FID) ಸೃಷ್ಟಿಸಲು ರೈತರು ಅರ್ಜಿಯೊಂದಿಗೆ ಆರ್ಟಿಸಿ (RTC), ಆಧಾರ್ ಕಾರ್ಡ್, ರೈತರ ಬ್ಯಾಂಕ್ ಪುಸ್ತಕದ ಜೆರಾಕ್ಸ್, ಸ್ವಯಂ ಧೃಢೀಕೃತ ಘೋಷಣಾ ಪತ್ರದೊಂದಿಗೆ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆಗೆ 2020ರಜೂನ್ 11ರ, ಸಂಜೆ 5.00 ಗಂಟೆಯೊಳಗಾಗಿ ಅರ್ಜಿ ಸಲ್ಲಿಸುವುದು. ತದನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸದರಿ ಹಣ್ಣು ಮತ್ತು ತರಕಾರಿ ಬೆಳೆಗಾರರು ಸಲ್ಲಿಸುವ ಅರ್ಜಿಗಳ ತಾಕುಗಳನ್ನು ಹೋಬಳಿ ಮಟ್ಟದ ಸಮಿತಿಯು ಶೇಕಡ 100 ರಷ್ಟು ತಾಕು ಪರಿಶೀಲನೆ ಕೈಗೊಂಡು ಧೃಢೀಕರಿಸಿ 2020ರ ಜೂನ್ 24ರೊಳಗಾಗಿ ತಾಲ್ಲೂಕು ಮಟ್ಟದ ಸಮಿತಿಗೆ ಸಲ್ಲಿಸುವುದು
ಮುಂದುವರೆದು, ಮಾರ್ಚ್ 4ನೇ ವಾರದ ನಂತರ ನಾಟಿ ಮಾಡಿರುವ ತರಕಾರಿ ಮತ್ತು ಹಣ್ಣು ಬೆಳೆಗಾರರನ್ನು ಸದರಿ ಯೋಜನೆಯಡಿ ಪರಿಹಾರಕ್ಕೆ ಪರಿಗಣಿಸಲು ಅವಕಾಶವಿರುವುದಿಲ್ಲ. ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು ತೋಟಗಾರಿಕೆ ಇಲಾಖೆಯ ಸೂಚನಾ ಫಲಕದಲ್ಲಿ 2019ರ ಮುಂಗಾರು ಹಾಗೂ 2019ರ ಹಿಂಗಾರು (Crpo Survey) ರೈತರ ಪಟ್ಟಿಯನ್ನು ಪ್ರಕಟಿಸಲಾಗುವುದು, ಸದರಿ ಮಾಹಿತಿಯನ್ನು ಜಿಲ್ಲೆಯ ಎಲ್ಲಾ ರೈತರು ಪರಿಶೀಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9448001644, ತಾಂತ್ರಿಕ ಸಹಾಯಕರು ಮೊ.ಸಂ.: 9886736664, ಕಚೇರಿ ದೂ.ಸಂ.: 080 27681204. ದೊಡ್ಡಬಳ್ಳಾಪುರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9632410677, ತಾಂತ್ರಿಕ ಸಹಾಯಕರು ಮೊ.ಸಂ.: 9741895988, ಕಚೇರಿ ದೂ.ಸಂ.: 080 27623770. ಹೊಸಕೋಟೆ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9538953939, ತಾಂತ್ರಿಕ ಸಹಾಯಕರು ಮೊ.ಸಂ.: 8453966868, ಕಚೇರಿ ದೂ.ಸಂ.: 080 29716626. ಹಾಗೂ ನೆಲಮಂಗಲ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9901754339, ತಾಂತ್ರಿಕ ಸಹಾಯಕರು ಮೊ.ಸಂ.: 9980276248, ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ) ಮಾಹಾಂತೇಶ ಮುರಗೋಡ (ಮೊ.ಸಂ.: 9448999214) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆ
ದೊಡ್ಡಬಳ್ಳಾಪುರ : ಲಾಕ್ಡೌನ್ ಅವಧಿಯಲ್ಲಿ ದೈನಂದಿನ ಉಟೋಪಚಾರಕ್ಕಾಗಿ ವಲಸೆ ಕಾರ್ಮಿಕರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಅಭಿಯಾನ್ ಯೋಜನೆಯಡಿ, ಷರತ್ತುಬದ್ಧವಾಗಿ ಉಚಿತ ಪಡಿತರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ ವಿತರಿಸಲಾಗುವುದು.
ವಲಸೆ ಕಾರ್ಮಿಕ ಕುಟುಂಬದ ಪ್ರತಿ ಸದಸ್ಯರಿಗೆ 06 ಕೆ.ಜಿ.ಅಕ್ಕಿ ಹಾಗೂ ಕೇಂದ್ರ ಸರ್ಕಾರದಿಂದ ಪ್ರತಿಯೊಂದು ಕುಟುಂಬಕ್ಕೆ ನೀಡುವ ಹಂಚಿಕೆಯಂತೆ ಕಡಲೇಕಾಳು ಉಚಿತವಾಗಿ ನೀಡಲಾಗುವುದು.
ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ಮಾಹೆಯಲ್ಲಿ ಉಚಿತ ಪಡಿತರ ವಿತರಿಸಲು ಕ್ರಮವಹಿಸಲಾಗಿದ್ದು, ಮೇ ಮಾಹೆಯಲ್ಲಿ ಉಚಿತ ಪಡಿತರ ಪಡೆಯದಿರುವವರು, ಜೂನ್ ಮಾಹೆಯಲ್ಲೂ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೂನ್ 10ರ ವರೆಗೆ ಉಚಿತ ಪಡಿತರ ವಿತರಣೆಯಾಗಲಿದೆ.
ಸರ್ಕಾರದ ಆದೇಶ ಪ್ರಕಾರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹಾಗೂ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಜೀವನ ನಿರ್ವಹಣೆಗಾಗಿ ಹೋಗಿರುವವರನ್ನು ವಲಸೆ ಕಾರ್ಮಿಕರು ಎಂಬುದಾಗಿ ಪರಿಗಣಿಸಲಾಗಿದ್ದು, ಫಲಾನುಭವಿಯು ಹಾಲಿ ನೆಲೆಸಿರುವ ಸ್ಥಳದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿದಾರರಾಗಿರಬಾ