ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರ ಐದನೇ ಹಂತದ ಲಾಕ್ಡೌನ್ ಘೋಷಣೆ ಮಾಡಿ ಜೂನ್ 30 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿರುವ ವಿವರ ಹೀಗಿದೆ.
1.ಕಂಟೈನ್ಮೆಂಟ್ ಝೋನ್ ಬಿಟ್ಟು ಎಲ್ಲಾ ಕಡೆ ಚಟುವಟಿಕೆಗಳಿಗೆ ಅವಕಾಶ.
2.ಕಂಟೈನ್ ಮೆಂಟ್ ಝೋನ್ಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್.
3.ಕಂಟೈನ್ಮೆಂಟ್ ಝೋನ್ಗಳ ಗುರುತಿಸುವಿಕೆ ಆಯಾ ಜಿಲ್ಲಾಡಳಿತದ ಜವಬ್ದಾರಿ.
5.ಅಂತರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಬೇಕಿಲ್ಲ.
ಜೂ.8 ರಿಂದ ಈವಲಯಗಳಿಗೆ ಅವಕಾಶ
1.ದೇಗುಲಗಳು, ಧಾರ್ಮಿಕ ಸ್ಥಳಗಳ ತೆರೆಯಲು ಅನುಮತಿ.
2.ಹೋಟೆಲ್, ರೆಸ್ಟೋರೆಂಟ್ ಹಾಗೂ ಆಸ್ಪತ್ರೆಗಳ ಸೇವೆಗಳು ಲಭ್ಯ.
3.ಶಾಪಿಂಗ್ ಮಾಲ್ಗಳನ್ನು ತೆರೆಯಲು ಅನುಮತಿ.
ಏನಿರಲ್ಲ
ಜಿಮ್, ಸ್ವಿಮ್ಮಿಂಗ್ ಪೂಲ್, ಥಿಯೇಟರ್ ಎಂದಿನಂತೆ ಬಂದ್.ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ,ನಿಯಮ ಉಲ್ಲಂಘಿಸಿದ್ರೆ ಶಿಕ್ಷಾರ್ಹ ಅಪರಾಧ.ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಸದ್ಯಕ್ಕೆ ಓಪನ್ ಇಲ್ಲ.ಶಾಲಾ ಕಾಲೇಜುಗಳ ಆರಂಭದ ಬಗ್ಗೆ ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿ ನಿರ್ಧಾರ.ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಮುಂದುವರಿಕೆ.ಮದುವೆಗೆ 50 ಮಂದಿ, ಅಂತ್ಯಕ್ರಿಯೆಗೆ 20 ಮಂದಿ ಮೀರುವಂತಿಲ್ಲ ಎಂದು ತಿಳಿಸಿದೆ.