Site icon Harithalekhani

ಸಂಕಷ್ಟದಲ್ಲಿರುವವರಿಗೆ ನೆರವು ನೀಡಿ : ಶ್ರೀ ದಯಾನಂದಪುರಿ ಸ್ವಾಮಿ

ದೊಡ್ಡಬಳ್ಳಾಪುರ : ಗಾಯತ್ರಿಪೀಠ ಮಿತ್ರಬಳಗ ಟ್ರಸ್ಟ್, ಬಿಜೆಪಿ ಮುಖಂಡ ಹಾಗು ದಾನಿ ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ನೇತೃತ್ವದಲ್ಲಿ ಬಡ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ವಿತರಿಸಲಾಯಿತು.

ಹಂಪಿ ಗಾಯತ್ರಿ ಪೀಠಾಧ್ಯಕ್ಷರಾದ ಶ್ರೀ ದಯಾನಂದಪುರಿ ಸ್ವಾಮಿ ಕಿಟ್ಗಳನ್ನು ವಿತರಿಸಿ ಮಾತನಾಡಿ, ಸೇವಾ ಕಾರ್ಯಗಳ ಮೂಲಕ ನಮ್ಮ ಮಾನವ ಜನ್ಮವನ್ನು ಸಾರ್ಥಪಡಿಸಿಕೊಳ್ಳಬೇಕಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಸಹಸ್ರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವುನೀಡುವುದು ನಮ್ಮೆಲ್ಲರ ಹೊಣೆಯಾಗಿದೆ. ಕೊವಿಡ್ -19 ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮಿ ಎಚ್.ಪಿ.ಶಂಕರ್, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರಮೇಶ್, ಬಿಜೆಪಿ ಮುಖಂಡ ಹಾಗು ದಾನಿ ನಾರಾಯಣಸ್ವಾಮಿ, ಬೆಂಗಳೂರಿನ ಶ್ರೀ ಶಂಕರಿ ಬಳಗದ ಸಂಸ್ಥಾಪಕಿ ಎಚ್.ಸರೋಜಮ್ಮ, ಗಾಯತ್ರಿಪೀಠ ಮಿತ್ರಬಳಗ ಟ್ರಸ್ಟ್ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಆರೂಢಿ ರಮೇಶ್, ಟ್ರಸ್ಟೀಗಳಾದ ಶಿವಾನಂದ, ಸುಧಾಕರ್, ಕೃಷ್ಣಮೂರ್ತಿ, ನಗರಸಭೆ ಮಾಜಿ ಸದಸ್ಯ ಎಚ್.ಎಸ್.ಶಿವಶಂಕರ್, ದೇವಾಂಗ ಪತ್ರಿಕೆಯ ರಾಜಶೇಖರ್, ಲಿಂಗರಾಜ್ ಮತ್ತಿತರರು ಹಾಜರಿದ್ದರು.

Exit mobile version