Site icon Harithalekhani

ಜೂನ್ 1ರಂದು ವೀರ ಸಾವರ್ಕರ್ ಹೆಸರಿಗೆ ಒತ್ತಾಯಿಸಿ ಹಿಂಜಾವೇಯಿಂದ ಬೈಕ್ ಜಾಥಾ

ದೊಡ್ಡಬಳ್ಳಾಪುರ : ಯಲಹಂಕ ಸೇತುವೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಸೇತುವೆ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ. ಹಿಂದು ಜಾಗರಣ ವೇದಿಕೆಯಿಂದ ವಾಹನ ಜಾಥಾ (ಬೈಕ್ ರ್ಯಾಲಿ) ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಂಯೋಜಕ್ ಶಿವಕುಮಾರ್ ತಿಳಿಸಿದ್ದಾರೆ.

ಜೂನ್ 1 ರಂದು ಬೆಳಗ್ಗೆ 9 ಗಂಟೆಗೆ

ನಗರದ ಖಾಸ್ ಬಾಗ್ ಸಮೀಪದಲ್ಲಿನ ರಾಮಣ್ಣ ಬಾವಿ ದೇವಸ್ಥಾನದಿಂದ ಜಾಥಾ ಆರಂಭವಾಗಲಿದ್ದು,ಯಲಹಂಕದ ಡೈರಿ ಸರ್ಕಲ್ ವರೆಗೂ ನಡೆಯಲಿದೆ.ಈ ವೇಳೆ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು.

ಜಾಥಾದಲ್ಲಿ ಭಾಗವಹಿಸುವವರು ಕೇಸರಿ ಶಲ್ಯ,ಮುಖಗವಸು(ಮಾಸ್ಕ್) ಧರಿಸುವುದು ಕಡ್ಡಾಯ ಹಾಗೂ ಭಗವಧ್ವಜ.ತರುವುದು ಕಡ್ಡಾಯವೆಂದು ಮನವಿ ಮಾಡಿದ್ದಾರೆ.

Exit mobile version