ಕರೊನಾ ನಡುವೆಯೇ ಮಿಡತೆ ಕೀಟಗಳ ಆತಂಕ

ಕಲಬುರಗಿ : ಮಹಾರಾಷ್ಟ್ರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಲಸೆಗಾರ ಬೆಳೆನಾಶಕ ಮರುಭೂಮಿ ಮಿಡತೆ ಕೀಟ  (Desert Locust) ಗಳ ಹಾವಳಿ ಕಂಡುಬಂದಿದ್ದು, ಯಾವುದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯಲ್ಲಿ  ಈ ಮಿಡತೆ ಕೀಟಗಳು ಬರುವ ಸಂಭವ ಇರುತ್ತದೆ. ಈ ಮಿಡತೆ ಕೀಟಗಳ ಹಾವಳಿ ಹತೋಟಿಗಾಗಿ ಜಿಲ್ಲೆಯ  ರೈತರು ವಿವಿಧ ಹಂತದಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಅವರು ಸಲಹೆ ನೀಡಿದ್ದಾರೆ. 

ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಕಾಲದ ಬೆಳೆಗಳು, ಕಟಾವು ಹಂತದಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯೀಕರಣದ ಗಿಡಮರಗಳು ಈ ಮಿಡತೆ ಕೀಟಗಳಿಂದ ಹಾನಿಗೊಳಗಾಗಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಿಡತೆ ಕೀಟಗಳ ನಿರ್ವಹಣಾ ಕ್ರಮಗಳು ಇಂತಿವೆ.  

ತತ್ತಿಗಳನ್ನು ನಾಶಪಡಿಸುವುದು: ಮಿಡತೆಗಳು ತತ್ತಿಗಳಿರಿಸಿದ ಜಾಗವನ್ನು ಗುರುತಿಸಿ ಅವುಗಳ ಸುತ್ತಲು ಕಂದಕ (2 ಅಡಿ ಅಗಲ  ಮತ್ತು 2 ಅಡಿ ಆಳ) ವನ್ನು ನಿರ್ಮಿಸಿ ತತ್ತಿಯಿಂದ ಬರುವ ಮರಿಗಳನ್ನು ಆ ಕಂದಕಗಳಲ್ಲಿ ಬಿಡುವಂತೆ ಮಾಡುವುದು. ಅಲ್ಲದೆ ತತ್ತಿಗಳನ್ನು ನಾಶಪಡಿಸಲು ಮೇಲಿಂದ ಮೇಲೆ ಉಳುಮೆ ಮಾಡಬೇಕು.  ರೈತರು ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರಿ ಶಬ್ದವನ್ನು ಹುಟ್ಟಿಸುವುದು. ರೇಡಿಯೋ ಅಥವಾ ಎಲೆಕ್ಟ್ರಾನಿಕ್ ಸೌಂಡ್‍ಗಳನ್ನು ಹಚ್ಚುವುದು. ಇದರಿಂದ ಮಿಡತೆ ತಂಡಗಳು ಭೂಮಿಯ ಮೇಲಿನ ಬೆಳೆಗಳಿಗೆ ಬರುವುದಿಲ್ಲ. 

ಬೇವು ಆಧಾರಿತ ಸಿಂಪರಣೆ ಮಾಡುವುದು. (0.15% ಇ.ಸಿ) 45 ಮಿ.ಲಿ. ಅನ್ನು 15 ಲೀ. ನೀರಿನಲ್ಲಿ ಬೆರೆಸಿ ಹಾಲಿ ಬೆಳೆಗಳಿಗೆ ಹಾಗೂ ಸುತ್ತಮುತ್ತ ಗಿಡಗಳಿಗೆ ಸಿಂಪಡಿಸುವುದು. ತೇವಾಂಶ ಹೊಂದಿದ ಮರಳು ಮಣ್ಣಿನಲ್ಲಿ ಮಿಡತೆಗಳು ತತ್ತಿ ಇಟ್ಟಿರುವ ಜಾಗಗಳನ್ನು ಗುರುತಿಸಿ, ರಾಸಾಯನಿಕಗಳನ್ನು ಸಿಂಪಡಿಸಿ ತತ್ತಿ ಹಂತದಲ್ಲಿ ನಾಶಪಡಿಸುವುದು. ಬೆಳೆದು ನಿಂತ ಬೆಳೆಗೆ ಕ್ವಿನಾಲ್‍ಪಾಸ್ 1.5 % ಡಿ.ಪಿ. ಅಥವಾ ಕ್ಲೋರಿಪೈರಿಪಾಸ್ 1.5% ಡಿ.ಪಿ. ಅಥವಾ ಮಿಥೈಲ್ ಪ್ಯಾರಾಥೀಯಾನ್ 2% ಡಿ.ಪಿ. ಪುಡಿಯನ್ನು ಪ್ರತಿ ಹೇಕ್ಟೇರ್‍ಗೆ 25 ಕೆ.ಜಿ. ಯಂತೆ ಧೂಳಿಕರಿಸುವುದು.

ರೈತರು ಕಡ್ಡಾಯವಾಗಿ ಮೈ ತುಂಬಾ ಬಟ್ಟೆ ಧರಿಸಿ, ಮುಖಕ್ಕೆ ಮಾಸ್ಕ್, ಕೈ ಚೀಲಗಳು, ಟೋಪಿ ಹಾಗೂ ಕನ್ನಡಕವನ್ನು ಧರಿಸಿ ಬೆಳಗಿನ 7 ರಿಂದ 10 ಗಂಟೆಯೊಳಗಾಗಿ 500 ಮಿ.ಲಿ. ಡಿ.ಡಿ.ವಿ.ಪಿ. 76 % ಇ.ಸಿ. ಯನ್ನು 1500 ಲೀ. ನೀರಿಗೆ ಬೇರೆಸಿ ಅಥವಾ 100 ಕೆ.ಜಿ. ಮರಳು ಮಣ್ಣಿನ ಜೊತೆ ಬೆರೆಸಿ ಎರಚುವುದು. ಈ ಪುಡಿಯನ್ನು ಚೆಲ್ಲಿದ ನಂತರ ಕೂಡಲೇ ಹೊಲದಿಂದ ಹೊರಬರುವುದು. ಬಲಿಯುತ್ತಿರುವ ಮಿಡತೆಗಳು ಹೊಲದಲ್ಲಿ ಓಡಾಡುವಾಗ ಒಣಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಚ್ಚಿ ಸುಡುವುದು. ಸಾಗುವಳಿ ರಹಿತ ಜಮೀನಿನಲ್ಲಿ ಮಿಡತೆಗಳು ಗುಂಪು-ಗುಂಪಾಗಿ ಹರಡಿದಾಗ ಕ್ವಿನಾಲ್‍ಪಾಸ್ 1.5 % ಡಿ.ಪಿ. ಅಥವಾ ಕ್ಲೋರಿಪೈರಿಪಾಸ್ 1.5% ಡಿ.ಪಿ, ಅಥವಾ ಮಿಥೈಲ್ ಪ್ಯಾರಾಥೀಯಾನ್ 2% ಡಿ.ಪಿ. ಪುಡಿಯನ್ನು ಪ್ರತಿ ಹೇಕ್ಟೇರ್‍ಗೆ 25 ಕೆ.ಜಿ. ಯಂತೆ ಧೂಳಿಕರಿಸುವುದು ಅಥವಾ ಮೆಲಾಥಿಯಾ 96% ಯು.ಎಲ್.ವಿ.  1 ಲೀ. ಪ್ರತಿ ಹೇಕ್ಟರ್‍ಗೆ ಯು.ಎಲ್.ವಿ. ಸಿಂಪರಣೆ ಯಂತ್ರದ ಮೂಲಕ ನೇರವಾಗಿ ಮಿಡತೆಗಳ ಮೇಲೆ ಸಿಂಪಡಿಸುವುದು.

ಉತ್ತರ ಭಾರತದಲ್ಲಿನ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಮಿಡತೆಯ ಹಾವಳಿ ಉಲ್ಬಣವಾಗಿದ್ದು, ಪೂರ್ವ ಮಹಾರಾಷ್ಟ್ರದ ಭಾಗದಲ್ಲಿಯೂ ಹರಡುತ್ತಿದೆ. ಪಂಜಾಬ್ ಹಾಗೂ ಗುಜರಾತ್ ರೈತರಿಗೂ ಕೂಡ ಮಿಡತೆಗಳ ಹಾವಳಿ ಬಗ್ಗೆ ಎಚ್ಚರಿಸಲಾಗಿದೆ. ಈ ಮಿಡತೆಗಳು ಅಲೆ ಅಲೆಯಾಗಿ ಗುಂಪಿನಲ್ಲಿ ಒಂದು ದಿನದಲ್ಲಿ 150 ಕಿ.ಮೀ. ದೂರ ಗಾಳಿಯ ದಿಕ್ಕಿನಲ್ಲಿ ಹಾರಬಲ್ಲವು. ಒಂದು ಮಿಡತೆಯು ತನ್ನಷ್ಟೆ ತೂಕದ ಆಹಾರವನ್ನು ತಿನ್ನಬಲ್ಲವು. ಎಫ್.ಪಿ.ಓ. ವರದಿ ಪ್ರಕಾರ ಒಂದು ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡ ಈ ಮಿಡತೆಗಳ ಸೈನ್ಯ (ಸುಮಾರು 40 ಮಿಲಿಯನ್) ಒಂದು ದಿನದಲ್ಲಿ 35,000 ಸಾವಿರ ಜನರು ತಿನ್ನುವಷ್ಟು ಅಹಾರವನ್ನು ತಿನ್ನಬಲ್ಲವು. 

ಈ ಮಿಡತೆಗಳು ಬಹುಭಕ್ಷಕ ಕೀಟಗಳಾಗಿದ್ದು, ಯಾವುದೇ ಗಿಡದ ಅಥವಾ ಬೆಳೆಯ ಎಲೆಗಳು ಹೂ, ಹಣ್ಣು, ಬೀಜ, ಮರದ ತೊಗಟೆ ಹಾಗೂ ಬೆಳೆಯ ಕುಡಿಗಳನ್ನು ನಿರ್ದಾಕ್ಷಿಣ್ಯವಾಗಿ ಭಕ್ಷಿಸುತ್ತವೆ. ಪ್ರಪಂಚದಲ್ಲಿ ಮಿಡತೆಗಳಲ್ಲಿ 10 ಪ್ರಬೇದಗಳಿದು,್ದ ಭಾರತದಲ್ಲಿ ನಾಲ್ಕು ಪ್ರಭೇದಗಳಿರುತ್ತದೆ. ಹೆಣ್ಣು ಮಿಡತೆಯು ತೇವಾಂಶ ಹೊಂದಿರುವ ಮರಳು ಮಿಶ್ರಿತ ಮಣ್ಣಿನಲ್ಲಿ ತನ್ನ ಜೀವಾವಧಿಯಲ್ಲಿ ವಾರಕ್ಕೊಮ್ಮೆ 1000 ತತ್ತಿಗಳನ್ನು ಪ್ರತಿ ಚದುರ ಅಡಿಗೆ ಇಡುತ್ತಿದ್ದು, 3 ಸಲ ಈ ಆವೃತ್ತಿ ಇರುತ್ತದೆ. ಪ್ರಭುದ್ಧತೆ ಮಿಡತೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ 12-16 ಕಿ. ಮೀ. ವೇಗದಲ್ಲಿ ಹಾರುತ್ತವೆ.

ಮಿಡತೆಗಳು ಕಡಿಮೆ ಸಂಖ್ಯೆಯಲ್ಲಿದ್ದಾಗ ಅಷ್ಟೇನು ಹಾನಿ ಮಾಡುವುದಿಲ್ಲ. ಆದರೆ ಅನೂಕೂಲಕರ ಹವಾಮಾನ ಸಂದರ್ಭದಲ್ಲಿ ಅಂದರೆ ಬೇಸಿಗೆ ನಡುವೆ ಸರಣಿ ಮಳೆಗಳು ಬಂದಾಗ ತೇವಾಂಶವುಳ್ಳ ಪರಿಸರ ಇವುಗಳಿಗೆ ಹುಟ್ಟಿಕೊಳ್ಳಲು ಪೂರಕ ಪರಿಸ್ಥಿತಿ ಎನಿಸುತ್ತದೆ.  ಪ್ರಸ್ತುತ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಾನಾ ಬಗೆಯ ಚಂಡಮಾರುತಗಳು ಈ ಮಿಡತೆಗಳ ಹುಟ್ಟಿಗೆ ಪೂರಕವಾದ ವಾತಾವರಣ ಸೃಷ್ಟಿಸಿವೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಸಂದರ್ಭದಲ್ಲಿನ ಅಪರಿಮಿತ ಸಂಖ್ಯೆಯಲ್ಲಿ ಹುಟ್ಟಿಕೊಂಡು ತಾವು ಹುಟ್ಟಿಕೊಂಡ ಪ್ರದೇಶದಿಂದ ಕೋಟ್ಯಾಂತರ ಸಂಖ್ಯೆಯಲ್ಲಿ ಚಕ್ರವಾಗಿ ಹರಡುತ್ತಾ ಕೆಳಗಿಳಿದು ಹೊಲದಲ್ಲಿರುವ ಬೆಳೆಗಳನ್ನು ಕ್ಷಣಾರ್ಧದಲ್ಲಿ  ತಿಂದು ದ್ವಂಸ ಮಾಡುತ್ತಾ ಅಲ್ಲಿಯೇ ಸಂತ್ತಾನೋತ್ಪತ್ತಿ ಮಾಡಿ ಮತ್ತಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಾ ಹೋಗುತ್ತವೆ.

ರಾಜಕೀಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ವಾಸಿಸಲು ಮನೆ ಇಲ್ಲದ ಕಾರಣ ಧರ್ಮಸ್ಥಳದಿಂದ ಮನೆ ನಿರ್ಮಿಸಿಕೊಡಲಾಗುತ್ತಿದೆ House construction

[ccc_my_favorite_select_button post_id="99191"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ ಎಂದು ಅಭಿಮಾನಿಗಳ ಆಕ್ರೋಶ| Darshan

ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ

ಕೆಲ ಖಾಸಗಿ ಸುದ್ದಿವಾಹಿನಿಗಳ ಬಗ್ಗೆ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ Darshan

[ccc_my_favorite_select_button post_id="99206"]
Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. Accident

[ccc_my_favorite_select_button post_id="99186"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]