Site icon Harithalekhani

ಜನ್ಮದಿನದ ಪೂಜೆಗೆ ಬಂದವರು ತಿಪ್ಪಗಾನಹಳ್ಳಿ ಕೆರೆಯಲ್ಲಿ ಮುಳುಗಿ ಸಾವು

ದೊಡ್ಡಬಳ್ಳಾಪುರ : ತಾಲೂಕಿನ ಗುಂಜೂರು ಟೋಲ್ ಬಳಿಯಿರುವ ತಿಪ್ಪಗಾನಹಳ್ಳಿ ಕೆರೆಗೆ ಈಜಲು ತೆರಳಿದ್ದ ಮೂವರು ಯುವಕರು ನೀರಲ್ಲಿ ಮುಳಗಿ ಸಾವನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿಗಳಾದ ರಾಜು (19),ಚಂದ್ರು (20),ನವೀನ್ (24) ಎಂದು ಗುರುತಿಸಲಾಗಿದೆ.

 ನವೀನ್ ಎಂಬುವವರ ಹುಟ್ಟುಹಬ್ಬದ ನಿಮಿತ್ತ  ತಾಲೂಕಿನ ಘಾಟಿ ದೇವಾಲಯಕ್ಕೆ ಬೆಂಗಳೂರಿನಿಂದ 8 ಮಂದಿ ವಾಹನದಲ್ಲಿ ಆಗಮಿಸಿದ್ದರು.ಲಾಕ್ಡೌನ್ ಹಿನ್ನೆಲೆ ದೇವಾಲಯಕ್ಕೆ ಪ್ರವೇಶ ನೀಡದ ಕಾರಣ,ಹೊರಗಿಂದಲೇ ದೇವರಿಗೆ ನಮಸ್ಕರಿಸಿ,ಸಮೀಪದಲ್ಲಿನ ತಿಪ್ಪಗಾನಹಳ್ಳಿ ಕೆರೆ ಬಳಿ ಈಜಲು ತೆರಳಿ,ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌

ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,ಸ್ಥಳಕ್ಕೆ ಪೊಲೀಸರು,ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು,ಮೃತರ ಶವಗಳ ಶೋಧ ಕಾರ್ಯ ಸಂಜೆಯವರೆಗೂ ಮುಂದುವರೆದಿತ್ತು.

Exit mobile version