Site icon Harithalekhani

ಸೂಲುಕುಂಟೆ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ : ತಾಲೂಕಿನ ಸೂಲುಕುಂಟೆ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತನನ್ನು ಬೂಚನಹಳ್ಳಿ ನಿವಾಸಿ ಹನುಮಂತರಾಯಪ್ಪ (58) ಎಂದು ಗುರುತಿಸಲಾಗಿದೆ.

ಮೃತನು ಕಳೆದ ಮೂರು ದಿನಗಳಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಡದಿ ಹುಡುಕಾಟ ನಡೆಸಿದ್ದು,ಹಸು ಮೇಸುವವರಿಗೆ ಕೊಳೆತ ಸ್ಥಿತಿಯಲ್ಲಿ ಶವ ಕಂಡಿದೆ ಎಂದು ಪೊಲೀಸ್ ಮೂಲಗಳು #ಹರಿತಲೇಖನಿಗೆ ತಿಳಿಸಿವೆ.

ಘಟನೆ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ ಬಳಸಲಾಗಿದೆ)

Exit mobile version