ದೊಡ್ಡಬಳ್ಳಾಪುರ : ಕರೊನಾ ಸೋಂಕನ್ನು ತಡೆಗಟ್ಟಲು ಘೋಷಿಸಲಾದ ಲಾಕ್‌ಡೌನ್ ಹಿನ್ನೆಲೆ,ಕಳೆದ ಎರಡು ತಿಂಗಳಿಂದ ಡಿಪೋಗಳಲ್ಲೇ ನಿಂತಿದ್ದ ಸಾರಿಗೆ ಬಸ್‌ಗಳು. ಇಂದಿನಿಂದ ರಸ್ತೆಗಿಳಿದು ಸಾರ್ವಜನಿಕರಿಗೆ ಸೇವೆ ನೀಡಲಾರಂಭಿಸಿವೆ.
ಸರ್ಕಾರ ಲಾಕ್ ಡೌನ್ ಸರಳಗೊಳಿಸಿ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಿದ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ 15ಬಸ್ ಗಳನ್ನು ರಸ್ತೆಗಿಳಿಸಲು ಸಿದ್ದತೆ ನಡೆಸಲಾಗಿದೆ.
ಆರಂಭಿಕವಾಗಿ ಕಾವೇರಿ ಭವನ ಹಾಗೂ ದೊಡ್ಡಬಳ್ಳಾಪುರ ನಡುವೆ 8 ಬಸ್ ಗಳಿಗೆ ಚಾಲನೆ ದೊರಕಿದ್ದು,ಪ್ರಯಾಣಿಕರ ಕೊರತೆಯಿಂದ ತುಮಕೂರಿಗೆ ತೆರಳುವ ಬಸ್‌ಗಳಿಗೆ ಚಾಲನೆ ದೊರಕಿಲ್ಲ.
ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಘಟಕ ತೆರೆಯಲಾಗಿದೆ.ಪ್ರಯಾಣಿಕರ ಕೈಗಳಿಗೆ ಸಾನಿಟೈಸರ್ ನೀಡಲಾಗುತ್ತಿದೆ.ಬಸ್ ಹತ್ತಲು, ಇಳಿಯಲು ಒಂದು ಬಾರಿಗೆ ಒಬ್ಬರಿಗೆ ಮಾತ್ರ ಅವಕಾಶವಿದೆ.ಸಿಬ್ಬಂದಿ, ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ತಿಳಿಸಿದ್ದಾರೆ.