Site icon Harithalekhani

ಮಹಾರಾಣಾ ಪ್ರತಾಪ್‌ ಯುವಕರಿಗೆ ಮಾದರಿ : ನಂದಾರಾಮ್ ಸಿಂಗ್

ಹೊಸಕೋಟೆ : ಶೂರತನಕ್ಕೆ ಹೆಸರಾಗಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪ ಸಿಂಗ್‌ ಇಂದಿನ ಯುವಕರಿಗೆ ಮಾದರಿ ಎಂದು ಬೆಂಗಳೂರು ಗ್ರಾಮಾಂತರ ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ನಂದಾರಾಮ್ ಸಿಂಗ್ ತಿಳಿಸಿದರು.

ನಗರದ ಎ.ಆರ್.ಸಿಂಗ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಮಹಾರಾಣಾ ಪ್ರತಾಪ ಸಿಂಗ್‌ ಅವರ 481ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ತನ್ನ ರಾಜ್ಯವನ್ನು ಸುಭಿಕ್ಷೆಯಿಂದ ಮುನ್ನಡೆಸುವ ಕಾರಣಕ್ಕೆ ಬಲಿಷ್ಠ ರಾಜರನ್ನು ಹಿಮ್ಮೆಟ್ಟಿಸಿದ ಕೀರ್ತಿ ಇವರದ್ದು. ಇವರ ಶೂರತನ ಹಾಗೂ ಧೈರ್ಯ ಇಂದಿನ ಯುವ ಸಮುದಾಯಕ್ಕೆ ಮಾದರಿ ಎಂದರು.

ತಾಲೂಕು ಅಧ್ಯಕ್ಷ ಎ.ಶಂಕರ್ ಮಾತನಾಡಿ,ಸಮಾಜ ಸುಧಾರಕರು, ಮಹಾನ್‌ ವ್ಯಕ್ತಿಗಳ ಜಯಂತಿಯನ್ನು ಕೇವಲ ಒಂದು ಸಮಾಜ ಆಚರಿಸುವುದಕ್ಕಿಂತ ಎಲ್ಲಾ ಸಮುದಾಯಗಳು ಒಗ್ಗೂಡಿಕೊಂಡು ಆಚರಿಸಿದಾಗ ಮಾತ್ರ ನಿಜವಾದ ಅರ್ಥ ಬರುತ್ತಿದೆ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದ್ದು,ಮಹಾನ್‌ ವ್ಯಕ್ತಿಗಳನ್ನು ಒಂದು ಸಮಾಜಕ್ಕೆ ಸೀಮಿತ ಮಾಡಲಾಗುತ್ತಿದೆ.ಒಂದೊಂದು ಸಮಾಜಕ್ಕೊಬ್ಬ ಮಹಾನ್‌ ನಾಯಕರನ್ನಾಗಿ ಮಾಡಿಕೊಳ್ಳುವ ಸಂಕುಚಿತ ಭಾವನೆ ತೊಲಗಬೇಕಿದೆ.ಸಂಘಟನೆಯಲ್ಲಿ ಮಹಿಳೆಯರಿಗೆ ಪ್ರಾತಿನಿದ್ಯ ನೀಡುವ ಮೂಲಕ ಸಂಕುಚಿತ ಭಾವನೆಯಿಂದ ಹೊರಬರಬೇಕಿದೆ ಎಂದರು.

ಈ ವೇಳೆ ಉಪಾಧ್ಯಕ್ಷ ಶಿವಾಆರಾಧ್ಯ,ಪ್ರಧಾನ ಕಾರ್ಯದರ್ಶಿ ದೀಪಕ್,ರಾಜಪೂತ್ ಸಂಘದ ಅಧ್ಯಕ್ಷ ದೇವೇಂದ್ರ ಸಿಂಗ್,ನಿರ್ದೆಶಕ ವೀರೆಂದ್ರ ಸಿಂಗ್,ಮುಖಂಡರಾದ ಮಂಜು.ಆನಂದ್ ಸಿಂಗ್ ಮತ್ತಿತರರು ಹಾಜರಿದ್ದರು

Exit mobile version