ದೊಡ್ಡಬಳ್ಳಾಪುರ : ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪರೈ ಅಕಾಲಿಕಮರಣಕ್ಕೆ ತಾಲೂಕು ಜಯಕರ್ನಾಟಕ ಸಂಘಟನೆವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಟಿಬಿವೃತ್ತದ ಬಳಿಯಿರುವ ಜಯಕರ್ನಾಟಕ ಸಂಘಟನೆಯ ಕಚೇರಿ ಬಳಿ ಮುತ್ತಪ್ಪರೈ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಯ ತಾಲೂಕು ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಕೆಂಪರಾಜು,ಕಾರ್ಯಾಧ್ಯಾಕ್ಷ ಕುಮಾರ್ ಗೌಡ,ಉಪಾಧ್ಯಕ್ಷರಾದ ರಾಜೇಂದ್ರಪ್ರಸಾದ್,ನರಸಿಂಹ,ಬಾಬಿಖಾನ್,ಜಿಲ್ಲಾ ಸಮಿತಿ ಸದಸ್ಯರಾದ ಶ್ರೀನಿವಾಸ್ ಮತ್ತಿತರಿದ್ದರು.