Site icon ಹರಿತಲೇಖನಿ

ಕೇಂದ್ರದಿಂದ ಧಮನಿತ ವರ್ಗಗಳ ಪರ ದ್ವನಿಯ ಧಮನ

Channel Gowda
Hukukudi trust

ದೊಡ್ಡಬಳ್ಳಾಪುರ : ಆನಂದ್ ತೇಲ್ತುಂಬ್ಡೆ ಮತ್ತು ಸಹಚರರನ್ನು ಸುಳ್ಳು ಕೇಸು ದಾಖಲಿಸಿ ಬಂಧಿಸುವ ಮೂಲಕ ಧಮನಿತ ವರ್ಗಗಳ ಪರ ದ್ವನಿಗಳನ್ನು ಧಮನ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಆರೋಪಿಸಿದರು.

Aravind, BLN Swamy, Lingapura

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾನವ ಹಕ್ಕುಗಳ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ ಮತ್ತು ಅವರ ಸಹಚರರ ಬಂದನ ಖಂಡಿಸಿ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ  ದಸಂಸ ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಏ.14 ರಂದು ಧಮನಿತ ವರ್ಗಗಳು ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿದ್ದರೆ ಸರ್ಕಾರ ತಳ ಸಮುದಾಯದ ದನಿ, ನಾಗರೀಕ ಹಕ್ಕುಗಳು ಹಾಗೂ ಶಿಕ್ಷಣ ಹಕ್ಕುಗಳ ಪ್ರತಿಪಾದಕರು,ಅಂಬೇಡ್ಕರ್ ಅವರ ವಂಶಸ್ಥರೂ ಆದ ಆನಂದ್ ತೇಲ್ತುಂಬ್ಡೆ ಅವರನ್ನು ಸುಳ್ಳು ಕೇಸು ದಾಖಲಿಸಿ ಬಂಧಿಸುವ ಮೂಲಕ  ದಲಿತರ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡಿದೆ ಎಂದ ಅವರು.ಹೋರಾಟಗಾರರನ್ನು ಬಂಧಿಸುವ ಫ್ಯಾಸಿಸ್ಟ್ ದೋರಣೆ ತಾಳುವ ಮೂಲಕ ಸಂವಿಧಾನದ ಆಶಯಗಳಿಗೆ ದಕ್ಕೆ ಉಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Aravind, BLN Swamy, Lingapura

ಬಂಧಿತರನ್ನು ಬಿಡುಗಡೆ ಮಾಡದೆ ಇದ್ದರೆ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ತೀವ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಆನಂದ್ ತೇಲ್ತುಂಬ್ಡೆ, ಗೌತಮ್ ನವಲಾಕ್ ಮತ್ತು ಅವರ ಸಹಚರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಆಯಾ ರಾಜ್ಯ ಸರ್ಕಾರಗಳು ಈ ಕೂಡಲೇ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ವಿಭಾಗೀಯ ಸಂಘಟನಾ ಸಂಘಟನಾ ಸಂಚಾಲಕರಾದ ಕೆ.ಆರ್.ಮುನಿಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸಂಚಾಲಕ ಬಿಸ್ಲಹಳ್ಳಿ ಮೂರ್ತಿ, ಸಂಘಟನಾ ಸಂಚಾಲಕರುಗಳಾದ ರಾಜುಸಣ್ಣಕ್ಕಿ, ಜೋಗಳ್ಳಿ ನಾರಾಯಣಸ್ವಾಮಿ, ಆವತಿ ತಿಮ್ಮರಾಯಪ್ಪ, ವೆಂಕಟೇಶಪ್ಪ ದೇವನಹಳ್ಳಿ ತಾಲ್ಲೂಕು ಸಂಚಾಲಕ ನರಸಪ್ಪ ಹೋಸಕೋಟೆ ತಾಲ್ಲೂಕು ಸಂಚಾಲಕ ಮುತ್ಸಂದ್ರ ಶಂಕರ್. ದೊಡ್ಡಬಳ್ಳಾಪುರದ ಛಲವಾದಿ ಸುರೇಶ ಮುಂತಾದವರು ಭಾಗವಹಿಸಿದ್ದರು.

Exit mobile version