ದೊಡ್ಡಬಳ್ಳಾಪುರ : ಕರೊನಾ ಸೋಂಕು ನಿಯಂತ್ರಣ ಕುರಿತು ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನಿ ನರೇಂದ್ರಮೋದಿ. ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು,ಮೆ.18ರ ನಂತರ ಲಾಕ್ ಡೌನ್ 4.O ಘೋಷಿಸಿದ್ದಾರೆ.
ದೇಶದಲ್ಲಿ ಕರೊನಾ ವೈರಸ್ 10.500ಗಡಿ ದಾಟಿರುವ ಹಿನ್ನೆಲೆ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದು,ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದರು.
ಕರೊನಾದಿಂದಾಗಿ ಯಾರೂ ಊಹಿಸದ ಕಷ್ಟ ಮನುಕುಲಕ್ಕೆ ಎದುರಾಗಿದ್ದು,ವೈರಸ್ ಎದುರು ಮಾನವರು ಸೋಲನ್ನು ಒಪ್ಪಿಕೊಳ್ಳಬಾರದು.ನಮ್ಮನ್ನು ರಕ್ಷಿಸಿಕೊಳ್ಳುವ ಜೊತೆಯಲ್ಲಿಯೇ ಕರೊನಾ ವಿರುದ್ದ ಮುನ್ನುಗ್ಗುವ ಸಮಯ ಇದಾಗಿದೆ.
ಭಾರತದಲ್ಲಿ ಪ್ರತಿ ದಿನ 2ಲಕ್ಷ ಪಿಪಿಇ ಕಿಟ್ ಸಿದ್ದವಾಗುತ್ತಿದ್ದು,2ಲಕ್ಷ ಎನ್ 95 ಕಿಟ್ ಸಿದ್ಧವಾಗುತ್ತಿವೆ.ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ ಆತ್ಮ ನಿರ್ಬರ ಅಭಿಯಾನದ ಅಡಿಯಲ್ಲಿ ದೇಶದ ಬಡವರು,ಮಧ್ಯಮ ವರ್ಗ,ಉದ್ಯಮ ಕ್ಷೇತ್ರ,ಕೃಷಿಕರು,ಶ್ರಮಿಕರು ಎಲ್ಲರಿಗೂ ಸೇರಿ 20ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜ್ ಘೋಷಿಸಲಾಗುತ್ತಿದೆ ಎಂದಿದ್ದಾರೆ.
ಕರೊನಾ ವಿರುದ್ಧ ಸಮರ ಮುಂದುವರೆಯಲಿದ್ದು,ಮೆ.18ರ ನಂತರ ದೇಶದಲ್ಲಿ ಲಾಕ್ ಡೌನ್ 4.O ಜಾರಿಗೊಳಿಸಲಾಗುತ್ತಿದೆ,ಮೆ.18ರ ಮುನ್ನವೆ ರೂಪುರೇಷೆಗಳನ್ನು ತಿಳಿಸಲಾಗುವುದು ಎಂದಿರುವ ಪ್ರಧಾನಿ.ಈ ಹಿಂದಿನ ಲಾಕ್ ಡೌನ್ ಗಿಂತ ಲಾಕ್ ಡೌನ್ 4.O ವಿನೂತನವಾಗಿರಲಿದೆ ಎಂದಿದ್ದಾರೆ.