ಮಾನವೀಯತೆ ಮರೆತ ವ್ಯಾಪಾರಿಗಳಿಗೆ ಜನರ ಹಿಡಿ ಶಾಪ..!

ಮುಖ್ಯಾಂಶಗಳು

ಕರೊನಾ ಸಂಕಷ್ಟದಲ್ಲಿ ದುಡ್ಡು ಮಾಡುವ ದುರಾಸೆಗಿಳಿದ ಆಸೆ ಬುರುಕ ವ್ಯಾಪಾರಿಗಳು.

ಸಾಮಗ್ರಿಗಳ ಕೊರತೆ ಇದೆ ಎಂಬ ನೆಪ / ಚಿತೆಯಲ್ಲಿ ಬೀಡಿ ಅಂಟಿಸಿಕೊಳ್ಳುವ ದುರಾಲೋಚನೆ

ಅನಿವಾರ್ಯವಾಗಿ ಖರೀದಿಸಬೇಕಾದ ಜನತೆಯಿಂದ ಹಿಡಿ ಶಾಪ 

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಬಡವರು

ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಹಿನ್ನಲೆ ಘೋಷಿಸಲಾದ ಲಾಕ್ ಡೌನ್ ಕಾರಣ ತರಕಾರಿ-ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ಜನ ಪರಿತಪಿಸುವಂತಾಗಿದೆ.

ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಕೊರತೆ ಇದೆ ಎಂಬ ನೆಪದಲ್ಲಿ ಮಾರಾಟಗಾರರು ಹಣ್ಣು,ತರಕಾರಿ, ಪಲ್ಯ, ದಿನಸಿ,ಕೋಳಿ ಸಾಮಗ್ರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.ಅನಿವಾರ್ಯವಾಗಿ ಜನರು ಹೆಚ್ಚಿನ ದರ ನೀಡಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದು,ಒಂದೆಡೆ ಕರೊನಾ ಹಾಗೂ ಇನ್ನೊಂದೆಡೆ ಮಾನವೀಯತೆ ಮರೆತು ದರ ಹೆಚ್ಚಳ ಮಾಡಿರುವ ವ್ಯಾಪಾರಸ್ಥರಿಗೆ ಜನ ಹಿಡಿಶಾಪ ಹಾಕತೊಡಗಿದ್ದಾರೆ.

5 – 15 ರೂ. ಬೆಲೆ ಏರಿಕೆ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ ಎಂಬ ನೆಪವೊಡ್ಡಿ ಸಗಟು ಮಾರಾಟಗಾರ 1ರೂ ಬೆಲೆ ಏರಿಕೆ ಮಾಡಿದರೆ.ಚಿಲ್ಲರೆ ಮಾರಾಟಗಾರರು 5 ರಿಂದ 10ರೂ ಬೆಲೆ ಏರಿಕೆ ಮಾಡಿ ಜನತೆ ಸಂಕಷ್ಟದಲ್ಲಿ ಬಸವಳಿಯುತ್ತಿದ್ದರೆ,ಇಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ದುಡ್ಡು ಮಾಡುವ ದಂದೆಗಿಳಿದಿದ್ದಾರೆ.

ಪ್ರಸ್ತುತ ಪ್ರತಿ ಕೆಜಿಗೆ ಸಕ್ಕರೆ 4-5ರೂ,ತೊಗರಿ ಬೇಳೆ 4-8 ರೂ, ಎಣ್ಣೆ 10-15 ರೂ, ರವಾ-ಅಕ್ಕಿ ಸೇರಿದಂತೆ ಎಲ್ಲವೂ ಕೆಜಿಗೆ 5 ರಿಂದ 15 ರೂ. ಗಳವರೆಗೆ ಏರಿಕೆ ಕಂಡಿವೆ. ಇನ್ನು ತರಕಾರಿಯೂ ತುಟ್ಟಿಯಾಗಿದ್ದು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಕಿತ್ತಳೆ 80 ರೂ. ಕೆಜಿ, ದ್ರಾಕ್ಷಿ 80-100 ರೂ.ಗಳು, ಕರಬೂಜ 50 ರೂ. ಗಳಿಗೆ ಒಂದು, ಕಲ್ಲಂಗಡಿ ಸಣ್ಣದು 50ರೂ. ಹಾಗೂ ದೊಡ್ಡದು 80-100 ರೂ., ಸೇಬು 80-150 ರೂ.ಗಳು, ಯಾಲಕ್ಕಿ ಬಾಳೆ ಕೆಜಿ 60 ರೂ.ಗಳಿಗೆ ಮಾರಾಟವಾಗ್ತಿವೆ.

ಸಿಗರೇಟ್ ಮಾರಾಟದಲ್ಲಿ ಸುಲಿಗೆ

ಆಹಾರ ಪದಾರ್ಥ,ಮತ್ತೊಂದೆಡೆ ಮದ್ಯ ಮಾರಾಟದಲ್ಲಿ ಬೆಲೆ ಏರಿಕೆಯಾದರೆ ಅಲ್ಲೊಂದು ಆಕ್ರಂದನ ಯಾರಿಗೂ ಕೇಳಿಸದಾಗಿದೆ.ಲಾಕ್ ಡೌನ್ ಆರಂಭವಾದಾಗಿನಿಂದ ಧೂಮಪಾನಿಗಳ ಜೇಬನ್ನು ಹಾಡು ಹಗಲೆ ಕತ್ತರಿ ಹಾಕುತ್ತಿರುವ ಸಿಗರೇಟ್ ಮಾರಾಟಗಾರರು.10 ರ ಬೆಲೆಗೆ 20,16ರ ಬೆಲೆಯ ಸಿಗರೇಟಿಗೆ 30ರೂಗೆ ಮಾರುವ ಮೂಲಕ ರಾಜಾರೋಶವಾಗಿ ಹಗಲು ಸುಲಿಯನ್ನು ನಡೆಸುತ್ತಿದ್ದರು ಧೂಮಪಾನಿಗಳು ಮಾತ್ರ ಯಾರಿಗೂ ಹೇಳಲಾಗದೆ ಮೌನ ವ್ಯಥೆ ಪಡುತ್ತಿದ್ದಾರೆ.

ಇಡೀ ದೇಶವೇ ಸಂಕಷ್ಟದಲ್ಲಿರುವಾಗ.ಚಿತೆಯಲ್ಲಿ ಬೀಡಿ ಅಂಟಿಸಿಕೊಳ್ಳುವ ದುರಾಲೋಚನೆಗೆ ಇಳಿದಿರುವ ವ್ಯಾಪಾರಿಗಳಿಗೆ ಜನರ ಶಾಪ ತಟ್ಟದೇ ಇರುವುದೆ…?

ನುಂಗಲಾರದ ತುತ್ತಾಗಿದೆ.

ಕರೊನಾ ಸೋಂಕು ತಡೆಗೆ ಹೋರಾಟ ನಡೆಸುತ್ತಿರುವಾಗಲೇ ಬೆಲೆ ಏರಿಕೆ ಎನ್ನುವುದು ಸಾರ್ವಜನಿಕರನ್ನು ಬಾಧಿಸತೊಡಗಿದೆ. ಏನೇ ಖರೀದಿಸಲು ಹೋದರೂ ಈ ಹಿಂದಿಗಿಂತಲೂ ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು – ರಾಜ್‌ವಡ್ಡಳ್ಳಿ,ಸಾರ್ವಜನಿಕ,ದೊಡ್ಡಬಳ್ಳಾಪುರ

ಸಾರಿಗೆ ವೆಚ್ಚ ಹೆಚ್ಚು.

ಎಲ್ಲೆಡೆ ಲಾಕ್‌ಡೌನ್ ಆಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳ ಓಡಾಟ ಇಲ್ಲವಾಗಿದೆ. ಇದರಿಂದ ಇರುವಷ್ಟು ದಾಸ್ತಾನು ಖಾಲಿ ಮಾಡಲಾಗುತ್ತಿದ್ದು, ಜೊತೆಯಲ್ಲಿಯೇ ಎಪಿಎಂಸಿಯಿಂದ ದಾಸ್ತಾನು ತರಿಸಿಕೊಳ್ಳಬೇಕು. ಇದಕ್ಕಾಗಿ ಸಣ್ಣ ವಾಹನದ ಮೊರೆ ಹೋಗುತ್ತಿದ್ದು, ಅವರು ಬಾಡಿಗೆ ದರವನ್ನು ಏರಿಸಿದ್ದಾರೆ. ಒಂದು ಟನ್‌ಗೆ ಸುಮಾರು 50-100 ರೂ.ಗಳವರೆಗೆ ಏರಿಕೆ ಮಾಡಿದ್ದು, ಇದರಿಂದ ಅನಿವಾರ್ಯವಾಗಿ ಬೆಲೆ ಏರಿಕೆಯಾಗುತ್ತಿದೆ. ಇದು ಕೂಡಾ ಗ್ರಾಹಕರ ಮೇಲೆ ಬೀಳುತ್ತಿದೆ – ಹೆಸರು ಹೇಳಲಿಚ್ಛಿಸದ ವ್ಯಾಪಾರಿ

ರಾಜಕೀಯ

ಹಕ್ಕೊತ್ತಾಯಕ್ಕೆ ಸಿಗಲಿಲ್ಲ ಕಿಮ್ಮತ್ತು; ಬಳ್ಳಾರಿ ಪಾಲಾಯ್ತು 88ನೇ ಸಾಹಿತ್ಯ ಸಮ್ಮೇಳನ..!| Kannada sahitya sammelana

ಹಕ್ಕೊತ್ತಾಯಕ್ಕೆ ಸಿಗಲಿಲ್ಲ ಕಿಮ್ಮತ್ತು; ಬಳ್ಳಾರಿ ಪಾಲಾಯ್ತು 88ನೇ ಸಾಹಿತ್ಯ ಸಮ್ಮೇಳನ..!| Kannada sahitya

ವೇದಿಕೆಯ ಬಳಿ ತೆರಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅವಕಾಶ ನೀಡಬೇಕೆಂದು ಗಟ್ಟಿ ದನಿಯಲ್ಲಿ ಹಕ್ಕೊತ್ತಾಯ ಮಾಡಬೇಕೆಂಬ ಕೂಗು Kannada sahitya sammelana

[ccc_my_favorite_select_button post_id="99244"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ..!: RobinUthappa

ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ..!: RobinUthappa

ರಾಬಿನ್ ಉತ್ತಪ್ಪ ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಇಪಿಎಫ್ ರಿಜಿನಲ್ ಕಮಿಷನರ್ ಷಟಾಕ್ಷರಿ ಗೋಪಾಲರೆಡ್ಡಿ ಎಂಬುವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. RobinUthappa

[ccc_my_favorite_select_button post_id="99224"]
ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ಮೃತ ದೇಹಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಅಂಬುಲೆನ್ಸ್‌ ಮೂಲಕ ತಲುಪಿಸಲಾಯಿತು‌. Accident

[ccc_my_favorite_select_button post_id="99247"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]