ದೊಡ್ಡಬಳ್ಳಾಪುರ : ತಾಲ್ಲೂಕಿನಲ್ಲಿ ಪ್ರತಿ ಬೂತ್ ಮಟ್ಟದ ಅಧಿಕಾರಿಗಳಿಂದ (ಶಿಕ್ಷಕ) ಮನೆ ಮನೆಗೆ ಭೇಟಿ ನೀಡಿ,ಆರೋಗ್ಯದ ಮಾಹಿತಿ ಸಂಗ್ರಹ ಆರಂಭವಾಗಿದೆ.
ಮನೆಯಲ್ಲಿನ ಸದಸ್ಯರ ಸಂಖ್ಯೆ, ಹೆಸರು,ವಿಳಾಸ, ವಯಸ್ಸು,ಆರೋಗ್ಯದ ಸಮಸ್ಯೆಗಳು ಹಾಗೂ ಮನೆಯಲ್ಲಿ ಯಾರಾದರು ಒಬ್ಬರ ಮೊಬೈಲ್ ಸಂಖ್ಯೆಯನ್ನು ಬರೆದುಕೊಳ್ಳಲಾಗುತ್ತಿದೆ. ಪ್ರತಿ ಕುಟುಂಬದ ಮಾಹಿತಿಯನ್ನು ಪ್ರತ್ಯೇಕವಾದ ಒಂದು ನಮೂನೆಯ ಪತ್ರದಲ್ಲಿ ಸಂಗ್ರಹಿಸಲಾಗುತ್ತಿದೆ.
ಈ ಮಾಹಿತಿ ಸಂಗ್ರಹದಲ್ಲಿ ಗ್ರಾಮದಲ್ಲಿನ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸಹ ಶಿಕ್ಷಕರೊಂದಿಗೆ ಸಹಕರಿಸುವ ಮೂಲಕ ಮಾಹಿತಿಯು ವಾಸ್ತವವಾಗಿರುವಂತೆ ನಿಗಾವಹಿಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.
ಈಗಾಗಲೇ ಮಾಹಿತಿ ಸಂಗ್ರಹ ಶೇ 60ರಷ್ಟು ಸಂಗ್ರಹ ಮಾಡಲಾಗಿದೆ. ಒಂದು ವಾರದ ಒಳಗೆ ಸಂಗ್ರಹ ಮಾಡಲಾಗಿರುವ ಮಾಹಿತಿಯನ್ನು ತಾಲ್ಲೂಕು ಚುನಾವಣ ಶಾಖೆಗೆ ತಲುಪಿಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.