Site icon
Harithalekhani

ಕರೊನಾ ಆತಂಕದ ನಡುವೆಯು 108 ಆಂಬುಲೆನ್ಸ್ ಸೇವೆಗೆ ಗ್ರಹಣ..!

ದೊಡ್ಡಬಳ್ಳಾಪುರ: ತುರ್ತು ಪರಿಸ್ಥಿತಿಯಲ್ಲಿ ಜನತೆಗೆ ಸೌಲಭ್ಯ ಒದಗಿಸುವ  ಆರೋಗ್ಯ ರಕ್ಷಾ ಕವಚದ 108 ಅಂಬ್ಯುಲೆನ್ಸ್ ದುರಸ್ಥಿಯಾಗಿದ್ದರು ಮತ್ತೆ ರಸ್ತೆಗಿಳಿಯದೆ ಗ್ಯಾರೇಜ್ನಲ್ಲಿ ಅನಾಥವಾಗಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಸಾಸಲು ಹೋಬಳಿ ವ್ಯಾಪ್ತಿಗೆಂದು ನೀಡಲಾದ ಆರೋಗ್ಯ ರಕ್ಷಾ ಕವಚದ 108 ಅಂಬ್ಯುಲೆನ್ಸ್ ಒಂದು ವಾರದ ಹಿಂದೆ ಸಣ್ಣ ಪ್ರಮಾಣದ ಅಪಾಘಾತಕ್ಕಿಡಾಗಿ ದುರಸ್ತಿಗೆಂದು ಗ್ಯಾರೇಜ್ ಸೇರಿತ್ತು. ಆದರೆ ದುರಸ್ತಿಯಾಗಿ ವಾರ ಕಳೆದರು ಮತ್ತೆ ಸೇವೆಗೆ ಕಳಿಸಲು ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ತಾಲ್ಲೂಕು ಕೇಂದ್ರದಿಂದ 26 ಕಿ.ಮಿ ದೂರದಲ್ಲಿನ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನತೆಗೆ ಸೌಲಭ್ಯ ದೊರಕದಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಭಯ ಜನತೆಯನ್ನು ಕಾಡುತ್ತಿದೆ.ಇಂತಹ ಸಂದರ್ಭದಲ್ಲಿ ಜನರಿಗೆ ತುರ್ತು ಸಂದರ್ಭದಲ್ಲಿ ಸೇವೆ ನೀಡುವ ಅಂಬ್ಯುಲೆನ್ಸ್ ಕಾರ್ಯ ನಿರ್ವಹಿಸದಿರುವುದು ಖಂಡನೀಯ ಎಂದು ಸಾಸಲು ಗ್ರಾಮದ ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ. 

ಸೋಮವಾರದೊಳಗೆ ಆಂಬುಲೆನ್ಸ್ ರಸ್ತೆಗಿಳಿಸಲು ಕ್ರಮ – ತಾಪಂ ಅಧ್ಯಕ್ಷ ಡಿ.ಸಿ.ಶೆಶಿಧರ್ 

ಆಂಬುಲೆನ್ಸ್ ಕಾರ್ಯ ನಿರ್ವಹಿಸಿದಿರುವ ಕುರಿತು ಮಾಹಿತಿ ಬಂದಿರಲಿಲ್ಲ.ಕೂಡಲೇ ಇಲಾಖೆ ಮುಖ್ಯಸ್ಥರೊಂದಿಗೆ ಮಾತನಾಡಿ,ಸೋಮವಾರದೊಳಗೆ ಆಂಬುಲೆನ್ಸ್ ಮರು ಚಾಲನೆ ನೀಡಲು ಆದೇಶಿಸಲಾಗುವುದು ಎಂದು  ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಹರಿತಲೇಖನಿಗೆ ಭರವಸೆ ನೀಡಿದ್ದಾರೆ.

Exit mobile version